ಕುಖ್ಯಾತ ದರೋಡೆಕೋರರ ಬಂಧನ.. ಹುಬ್ಬಳ್ಳಿಯ ಸೆಟ್ಲಮೆಂಟ್’ನ ಮೂವರು ಅರೆಸ್ಟ್

Dharwad News: ಧಾರವಾಡ: ಕುಖ್ಯಾತ ದರೋಡೆಕೊರರ ಹೆಡೆಮುರಿ ಕಟ್ಟುವಲ್ಲಿ ಧಾರವಾಡ ವಿದ್ಯಾಗಿರಿ ಪೋಲಿಸರು ಯಶಸ್ವಿಯಾಗಿದ್ದಾರೆ.

ರಾತ್ರಿ ವೇಳೆಯಲ್ಲಿ ಕಾರು, ಬೈಕ್ ಹಾಗೂ ಒಂಟಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಟೀಮ್ ಇದಾಗಿದ್ದು, ಜ.1 ರಂದು ಧಾರವಾಡ ಐಐಐಟಿ ಹತ್ತಿರ ಹುಬ್ಬಳ್ಳಿಯ ನಿವಾಸಿ ಮಲ್ಲಿಕಾರ್ಜುನ ಬಡ್ನಿ ಎಂಬಾತರ ಕಾರನ್ನು ಅಡ್ಡಗಟ್ಟಿ, ಕಾರಿನ ಕ್ಲಾಸ್ ಒಡೆದು ಚಿನ್ನದ ಸರ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಕ್ಟಿವ್ ಆಗಿದ್ದ ಧಾರವಾಡದ ವಿದ್ಯಾಗಿರಿ ಪೋಲಿಸರು, ಹುಬ್ಬಳ್ಳಿಯ ಸೆಟಲ್ಮೆಂಟ್ ಗಂಗಾಧರ ನಗರದ ಮೂರು ಆರೋಪಿಗಳಾದ ನಾಗರಾಜ್ ಕನ್ನೆಸ್ವರ್, ವಿಶಾಲ್ ಭಜಂತ್ರಿ ಹಾಗೂ ಬಬಜಾನ್ ಮುಜಾವರ್ ನನ್ನು ಚಾಕಚಕ್ಯತೆಯ ಕಾರ್ಯದಿಂದ ಬಂಧಿಸಿದ್ದಾರೆ.

ಅಷ್ಟೇ ಅಲ್ಲದೇ ವೈಜ್ಞಾನಿಕ ರೀತಿಯಲ್ಲಿ ತನಿಖೆ ಕಾರ್ಯ ನಡೆಸಿ, ಧಾರವಾಡದ ವಿದ್ಯಾಗಿರಿ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಮಾಡಲಾಗಿದ್ದ ಇನ್ನೊಂದು ಪ್ರಕರಣ, ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 2, ಹಳೇಹುಬ್ಬಳ್ಳಿ ಹಾಗೂ ಗೋಕುಲರಸ್ತೆ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣವನ್ನು ಭೇದಿಸಿದ್ದಾರೆ.

ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನು ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ 2 ಮೋಟಾರು ಸೈಕಲ್‌’ನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಹು-ಧಾ ಡಿಸಿಪಿಗಳಾದ ರಾಜೀವ್ ಎಂ, ರವೀಶ ಎಂ ಅವರ ಆದೇಶದ ಮೇರೆಗೆ ಧಾರವಾಡ ಶರಹ ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ಪ್ರಶಾಂತ್ ಸಿದ್ದನಗೌಡರ ಇವರ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಠಾಣೆಯ ಪೋಲಿಸ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆ ಮಾಡಿದೆ.

ಕಾರ್ಯಾಚರಣೆ ತಂಡದಲ್ಲಿ ಭಾಗಿಯಾದ ಪಿಎಸ್ಐ ಬಾಬಾ ಎಂ, ಪ್ರಮೋದ್ ಎಚ್.ಜಿ, ಮಹೋಹರ ಮಲ್ಲಿಗವಾಡ, ಎಎಸ್ಐ ಮದರಖಂಡಿ, ಬಸವರಾಜ್ ಸವಣೂರು ಹಾಗೂ ಸಿಬ್ಬಂದಿಗಳಾದ ಎಂ ಸಿ ಮಂಕಣಿ, ವಿ ಐ ಚವರಡ್ಡಿ, ಬಾಬು ದುಮ್ಮಾಳ, ಗಿರೀಶ ಬಿದರಳ್ಳಿ, ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಬಿ.ಎಂ.ಪಟಾತ, ಮಹಾಂತೇಶ ವಾಯ್.ಎಂ ಇದ್ದರು.

ಪೋಲಿಸರ ಕಾರ್ಯಕ್ಕೆ ಹು-ಧಾ ಪೋಲಿಸ ಆಯುಕ್ತೆ ರೇಣುಕಾ ಸುಕುಮಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದಿಂದ ನೊಂದು ಡಿ.ಕೆ ಸುರೇಶ್‌ ತಮ್ಮ ಆಕ್ರೋಶ ಹೊರಹಾಕಿದ್ದಾರೆ’

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ, ಹೊಸ ಪಕ್ಷ ಘೋಷಣೆ

ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ

About The Author