Hubli News: ಹುಬ್ಬಳ್ಳಿ: ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ನಾವು ವಿರೋಧ ಪಕ್ಷದವರಾಗಿ ಸರ್ಕಾರದ ಅಂಕುಡೊಂಕುಗಳನ್ನ ತಿದ್ದುವ ಕೆಲಸ ಮಾಡುತ್ತಿದ್ದೇವೆ. ಕಾದುನೋಡಿ ಲೋಕಸಭೆ ಚುನಾವಣೆ ನಂತರ ಬಹುದೊಡ್ಡ ಬದಲಾವಣೆಯಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಬಿಜೆಪಿ ಜಿಲ್ಲಾ ಕಾರ್ಯಕಾರಣಿಸಭೆಗೂ ಮುನ್ನ ಮಾತನಾಡಿದ ಅವರು, ಪಕ್ಷದ ನಿಯಮಾನುಸಾರವಾಗಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಇಂದು ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದೇವೆ. ಲೋಕಸಭಾ ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನ ಗೆಲ್ಲುವ ಕುರಿತು ಚರ್ಚೆ ನಡೆಸಲಿದ್ದೇವೆ. ಬಿಜೆಪಿಯಲ್ಲಿ ಯಾವುದೇ ನಿರ್ಣಯ ಆದರೂ ಅದನ್ನ ಒಗ್ಗೂಡಿಸಿಕೊಂಡು ನಾವು ಕೆಲಸಮಾಡುತ್ತೇವೆ. ಇಂದು ಯಾರ್ಯಾರು ಸೇರ್ಪಡೆಯಾಗುತ್ತಾರೋ ಅವರೆಲ್ಲರನ್ನೂ ಒಗ್ಗೂಡಿಸುವ ಕೆಲಸಗಳಾಗುತ್ತವೆ.ದೇಶದಲ್ಲಿಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿಮಾಡುವುದೇ ನಮ್ಮಉದ್ದೇಶ ಎಂದರು.
ಜಗದೀಶ ಶೆಟ್ಟರ್ ಮನೆಗೆ ಪಕ್ಷದ ಕಾರ್ಯಕರ್ತರು ತೆರಳದಂತೆ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ರೀತಿ ಯಾವುದೂ ಇಲ್ಲ. ಅವೆಲ್ಲ ಊಹಾಪೋಹಗಳು.ಮೊನ್ನೆಯಷ್ಟೇ ಎಲ್ಲರೂ ಒಗ್ಗೂಡಿ ಜಯೇಂದ್ರ ಅವರ ಮೆರವಣಿಗೆ ಮಾಡಿದ್ದೇವೆ ಯಾರಿಗೂ ಆ ರೀತಿ ಯಾವುದೇ ಸೂಚನೆ ನೀಡಿಲ್ಲ. ಕಾರ್ಯಕರ್ತರು ಎಲ್ಲ ನಾಯಕರ ಮನೆಗೆ ತೆರಳುವುದು ಸಾಮಾನ್ಯ ಎಂದರು.
ಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡೋದು ಪಕ್ಷದ ಹೈಕಮಾಂಡ್ ನಾಯಕರ ನಿರ್ಧಾರ. ಪ್ರಹ್ಲಾದ್ ಜೋಶಿಯವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಯನ್ನ ಮಾಡಿದ್ದಾರೆ. ಕಾಂಗ್ರೆಸ್ ದೆಹಲಿ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ,
ಕಾಂಗ್ರೆಸ್ ಕೇವಲ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದ ಶಾಸಕರಿಗೆ ಅನ್ಯಾಯ ಮಾಡಿದೆ. ಈವರೆಗೂ ಯಾವೊಬ್ಬ ಶಾಸಕರಿಗೂ ಅನುದಾನ ನೀಡದ ಹೀನಾಯ ಪರಿಸ್ಥಿತಿ ಸರ್ಕಾರ ಅನುಭವಿಸುತ್ತಿದೆ. ಗ್ಯಾರಂಟಿ ವಿಚಾರದಲ್ಲಿ ಸಿಎಂ ಹೇಳಬೇಕಿದ್ದ ಹೇಳಿಕೆಯನ್ನ ಬಾಲಕೃಷ್ಣ ಅವರಿಂದ ಹೇಳಿದ್ದಾರೆ. ಗ್ಯಾರಂಟಿಗಳು ಬಹುಬೇಗನೇ ಬಂದ್ ಆಗಬೇಕಿತ್ತು. ಆದ್ರೆ ಕಾಂಗ್ರೆಸ್ ನವರೇ ಈ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ನ ಬಹುತೇಕ ಶಾಸಕರಲ್ಲೂ ಈ ಬಗ್ಗೆ ಅಸಮಾಧಾನವಿದೆ ಎಂದರು.
ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ನಾನು ಬದುಕಿದ್ದೇನೆ ಎಂದು ಶಾಕ್ ನೀಡಿದ ನಟಿ ಪೂನಂ ಪಾಂಡೆ: ವೀಡಿಯೋ ವೈರಲ್

