Hassan News: ಹಾಸನ : ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿಸಚಿವ ಸಿ.ಟಿ.ರವಿ, ಎಲ್.ಕೆ.ಅಡ್ವಾನಿ ಅವರಿಗೆ ಭಾರತರತ್ನ ಅತ್ಯುನ್ನತ ಗೌರವ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಳೆದ ಆರು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿದ್ದು. ಭಾರತದ ರಾಜಕಾರಣಕ್ಕೆ ಹೊಸ ದಿಕ್ಕನ್ನು ಕೊಟ್ಟ ಆಧುನಿಕ ಉಕ್ಕಿನ ಮನುಷ್ಯ ಎಂದು ಅಭಿದಾನವನ್ನು ಪಡೆದಿರುವ, ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಕೊಟ್ಟಿರುವುದು ನಮಗೆಲ್ಲ ಅತ್ಯಂತ ಆನಂದ ತಂದಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಇದಕ್ಕಾಗಿ ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಎಲ್.ಕೆ.ಅಡ್ವಾನಿಯವರಿಗೆ ಭಾರತ ರತ್ನ ಕೊಡಬೇಕೆಂಬ ಅಪೇಕ್ಷೆಯಿತ್ತು. ಅವರಿಗೆ ಭಾರತ ರತ್ನ ನೀಡಿರುವುದು ಅತ್ಯಂತ ಆನಂದ ತಂದಿದೆ. ಹೊರಗಡೆಯವರು ಏನು ತಿಳಿದುಕೊಂಡಿದ್ದಾರೆ ಗೊತ್ತಿಲ್ಲ. ಅವರ ಮುತ್ಸದ್ದಿತನದ, ಅವರ ಅನುಭವದ ಮಾರ್ಗದರ್ಶನ ಬಾಜಪಗೆ ಇತ್ತು, ಇದೆ. ಬದುಕಿರುವವರಿಗೂ ಅದು ಇರುತ್ತೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಇನ್ನು ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು ಎಂಬ ಮಾಜಿಸಚಿವ ಸಿ.ಟಿ.ರವಿ ಹೇಳಿಕೆ ವಿಚಾರದ ಬಗ್ಗೆ ರವಿ ಪ್ರತಿಕ್ರಿಯಿಸಿದ್ದು, ಅವರ ಪಾರ್ಟಿದು ನಾವು ಕಮೆಂಟ್ಸ್ ಮಾಡಲು ಬರಲ್ಲ. ಕೇಸರಿ ನಮ್ಮಲ್ಲೆರಿಗೂ ಪ್ರೇರಣೆ ಕೊಟ್ಟಿರುವ ಬಣ್ಣ. ಕೇವಲ ಬಣ್ಣ ಮಾತ್ರ ಅಲ್ಲ, ಸಾವಿರ ವರ್ಷದ ಪರಂಪರೆ ಇದೆ. ಭಗವಾ ಎಂದರೆ ತ್ಯಾಗ, ಶೌರ್ಯ, ಕೋಟ್ಯಾಂತರ ಜನರಿಗೆ ವಿಶ್ವಾಸ ತುಂಬಿದೆ. ಗುರು ಗೋವಿಂದ ಸಿಂಗ್, ಶಿವಾಜಿ ಮಹಾರಾಜರು ಬಳಸಿದ್ದು ಭಗವೇನೆ. ಅರ್ಜುನನ ಧ್ವಜ ಬಣ್ಣವೂ ಭಗವೇ ಇತ್ತು. ಅದು ತ್ಯಾಗದ ಸಂಕೇತವೂ ಹೌದು. ಋಷಿಮುನಿಗಳು ಅದನ್ನು ತ್ಯಾಗದ ಸಂಕೇತವಾಗಿ ಬಳಸಿದ್ರೆ, ಕ್ಷತ್ರಿಯರು ಅದನ್ನು ಶೌರ್ಯದ ಸಂಕೇತವಾಗಿ ಬಳಸಿದ್ರು. ನಮಗೇನು ಸಂಕೋಚ ಇಲ್ಲ, ನಮಗೆ ಹೆಮ್ಮೆ ಇದೆ. ಕುಮಾರಸ್ವಾಮಿ ಅವರು ಸಂಕೋಚ ಪಡಬೇಕಿಲ್ಲ.
ಹಿಂದೂ ವಿರೋಧಿ ನೀತಿಯ ವಿರುದ್ಧ ಹಿಂದೂ ಸಂಘಟನೆಗಳು ಕರೆಕೊಟ್ಟ ಪಾದಯಾತ್ರೆಯಾಗಿತ್ತು. ಕೇವಲ ರಾಜಕೀಯ ಪಕ್ಷದ ನಾಯಕರು ಭಾಗವಹಿಸಿರಲಿಲ್ಲ. ಹಿಂದೂ ಸಂಘಟನೆಗಳು ಕರೆಕೊಟ್ಟ ಪಾದಯಾತ್ರೆಯಾಗಿತ್ತು. ಯಾರು ಸಂಕೋಚ ಪಡಬೇಕಾದ ಅವಶ್ಯಕತೆ ಇಲ್ಲ. ಭಗವಾ ಹಾಕುವುದರಿಂದ ನಮಗೆ ಕೆಟ್ಟದಾಗಲ್ಲ, ಒಳ್ಳೆಯದೇ ಆಗುತ್ತೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ನಾನು ಬದುಕಿದ್ದೇನೆ ಎಂದು ಶಾಕ್ ನೀಡಿದ ನಟಿ ಪೂನಂ ಪಾಂಡೆ: ವೀಡಿಯೋ ವೈರಲ್