Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಭಿಮಾನ ತೋರಿಸಲು ಹೋಗಿ ಮುಜುಗರಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ 1 ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಡಿಕೆಶಿ ಫುಲ್ ಗರಂ ಆಗಿದ್ದು, ಕಾರ್ಯಕರ್ತರಿಗೆ ಸಾರ್ವಜನಿಕರು ಬಾಯಿಗೆ ಬಂದಂತೆ ಬೈದು ಹೋಗಿದ್ದಾರೆ.
ಹೆದ್ದಾರಿಯಲ್ಲಿ ಪಟಾಕಿ ಹಾರಿಸಿದ್ದಕ್ಕೆ ಡಿಕೆಶಿ ಫುಲ್ ಗರಂ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಪಟಾಕಿ ಹಾರಿಸಿ ಅಂತಾ ಹೇಳಿದವರು ಯಾರು ನಿಮಗೆ..? ನಿಮಗೆ ಕಾನೂನು ಸುವ್ಯವಸ್ಥೆ ಬಗ್ಗೆ ಅರಿವು ಇಲ್ಲವಾ ಎಂದು ಗರಂ ಆಗಿದ್ದಾರೆ.
ಕಾರ್ಯಕರ್ತರಿಂದ ಪಟಾಕಿ ಹಾರಿಸಿದ ಹಿನ್ನೆಲೆ ಪಟಾಕಿ ಕಿಡಿ ರಸ್ತೆ ಬದಿಯಲ್ಲಿ ಬೆಂಕಿ ಹತ್ತಿಕೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರ ಅಭಿಮಾನವನ್ನು ಅಣಕಿಸುವಂತೆ ಮಾಡಿದೆ. ಯಾರೇ ಬಂದರೂ ಈ ತರ ಪಟಾಕಿ ಹಾರಿಸೋದು ಸರಿಯಲ್ಲ. ನಾನಿರಲಿ ಸಿಎಂ ಬರಲಿ ಈ ರೀತಿ ರಸ್ತೆಯಲ್ಲಿ ಪಟಾಕಿ ಹಾರಿಸಬಾರದು ಎಂದು ಎಚ್ಚರಿಕೆ ನೀಡಿದರು.
ಇನ್ನೂ ಸುಮಾರು ಸಮಯ ಟ್ರಾಫಿಕ್ ಜಾಮ್ ಆಗಿದ್ದರಿಂದ ಬಸ್‌ನಲ್ಲಿ ಬಾಗಿಲಿಗೆ ನಿಂತುಕೊಂಡು ಹರಸಾಹಸ ಪಡುತ್ತಿದ್ದ ಸಾರ್ವಜನಿಕರು ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.
ಪೊರಕೆ ಹಿಡಿದು ಬೀದಿ ಸ್ವಚ್ಛಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಕೇವಲ ಲೋಕಸಭಾ ಚುನಾವಣೆವರೆಗೂ ಮಾತ್ರ: ಶಾಸಕ ಅರವಿಂದ್ ಬೆಲ್ಲದ್