International News: ಭಾನುವಾರದ ದಿನ ಪಾಕಿಸ್ತಾನದಲ್ಲಿ ಚುನಾವಣಾ ಆಯೋಗದ ಮೇಲೆ ಗ್ರೈನೇಡ್ ದಾಳಿ ನಡೆದಿದ್ದರೆ, ಅದೇ ದಿನ ರಾತ್ರಿ ಪೊಲೀಸ್ ಠಾಣೆಯಲ್ಲಿ ಗುಂಡಿನ ದಾಳಿ ನಡೆಸಿದ್ದು, 10 ಪೊಲೀಸರು ಸಾವನ್ನಪ್ಪಿದ್ದಾರೆ, ಅಲ್ಲಿದ್ದ ಹಲವರು ಗಾಯಗೊಂಡಿದ್ದಾರೆ.
ಇದು ಉಗ್ರರ ಕೃತ್ಯವಾಗಿದ್ದು, ಪೊಲೀಸ್ ಠಾಣೆಗೆ ನುಗ್ಗಿದ ಉಗ್ರರು ಮೊದಲು ಗ್ರೈನೇಡ್ ದಾಳಿ ಮಾಡಿದ್ದಾರೆ. ಬಳಿಕ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಪೊಲೀಸರನ್ನು ಕೊಂದಿದ್ದಾರೆ. ಇನ್ನು ಈ ಉಗ್ರರ ದಾಳಿಯ ಹಿಂದೆ ಯಾವ ಉಗ್ರ ಸಂಘಟನೆ ಇದೆ ಎಂದು ತಿಳಿದು ಬಂದಿಲ್ಲ.
ಇನ್ನು ಭಾನುವಾರ ದಿನ, ಬಲುಚಿಸ್ತಾನದ ಚುನಾವಣಾ ಆಯೋಗದ ಮೇಲೆ ಗ್ರೈನೇಡ್ ದಾಳಿ ನಡೆದಿತ್ತು. ಆದರೆ ಅಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳೀಯ ಪೊಲೀಸರು ಈ ಕೃತ್ಯಯದಲ್ಲಿ ಭಾಗಿಯಾದವರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.
ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು
ರಾಜ್ಯಕ್ಕೆ ಅನ್ಯಾಯವಾಗಿದರೂ ಒಬ್ಬ ಸಂಸದರೂ ಧ್ವನಿ ಎತ್ತಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್..!
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್