National Political News: ನಾವು ಹಲವಾರು ಸೆಲೆಬ್ರಿಟಿಗಳನ್ನು ಕ್ರಿಕೇಟ್ ಆಡುವುದನ್ನು ನೋಡಿದ್ದೇವೆ. ಆದರೆ ಗಿಲ್ಲಿ ದಾಂಡು ಆಟ ಆಡೋ ರಾಜಕೀಯ ವ್ಯಕ್ತಿಯನ್ನು ನೋಡಿರುವುದು ಅಪರೂಪ.
ಭಾರತದ ಸಾಂಪ್ರದಾಯಿಕ ಆಟವಾದ ಗಿಲ್ಲಿ ದಾಂಡು ಆಟ ಹಲವರಿಗೆ ಇಷ್ಟವಾಗುವ ಆಟ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗಿಲ್ಲಿ ದಾಂಡು ಆಡಿದ್ದು, ಈ ವೀಡಿಯೋ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಮಧ್ಯಪ್ರದೇಶದ ಅಶೋಕ್‌ನಗರ ಜಿಲ್ಲೆಯಲ್ಲಿ ನಡೆದ ಎಂಪಿ ಸ್ಪೋರ್ಟ್ಸ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಈ ವೇಳೆ ಗಿಲ್ಲಿ ದಾಂಡು ಆಡಿ, ಎಂಜಾಯ್ ಮಾಡಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ಅವರು, ಕ್ರಿಕೇಟ್ ಅಂತೂ ನಾವು ತುಂಬ ಆಡಿದ್ದೇವೆ. ಆದರೆ ಇಂದು ಗಿಲ್ಲಿ ದಾಂಡು ಆಟವಾಡಿ ಮಜಾ ಬಂತು. ನೀವೂ ಕೂಡ ಟ್ರೈ ಮಾಡಿ, ನಿಮ್ಮ ಗಿಲ್ಲಿ ಹಾರಿತೋ ಇಲ್ಲವೋ ಅಂತಾ ಹೇಳಿ ಎಂದಿದ್ದಾರೆ.
क्रिकेट तो बहुत खेला, आज गिल्ली डंडा खेलने में मज़ा बहुत आया। आप सब भी ट्राई करके बताइए, आप सब से गिल्ली उड़ी या नहीं…? pic.twitter.com/fJaYUmYk18
— Jyotiraditya M. Scindia (@JM_Scindia) February 5, 2024
ನಾಗಿನ್ ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನಟಿ ಅಂಕಿತಾ: 1 ಎಪಿಸೋಡ್‌ಗೆ ಎಷ್ಟು ಸ್ಯಾಲರಿ ಗೊತ್ತಾ..?
ಹಸಿವೆಂದು ಬೆಕ್ಕಿನ ಹಸಿ ಮಾಂಸ ಸೇವಿಸಿದ ವ್ಯಕ್ತಿ: ಪೊಲೀಸರ ತನಿಖೆಯಿಂದ ನಿಜಾಂಶ ಬಯಲು