Hassan News: ಹಾಸನ: ಹಾಸನದಲ್ಲಿ ಮೇಲ್ಸೇತುವೆಯ ಎರಡು ಪಥದ ಕಾಮಗಾರಿ ಮುಗಿದಿದ್ದ ಹಿನ್ನೆಲೆ, ಕಳೆದ ಡಿಸೆಂಬರ್ 6ರಿಂದ ಜಿಲ್ಲಾಡವಳಿತ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಎಲ್ಲಾ ರೀತಿಯ ವಾಹನ ಓಡಾಟ ಶುರುವಾಗಿ, ಸಾರ್ವಜನಿಕರಿಗೆ ಈ ಬಗ್ಗೆ ಖುಷಿ ಇತ್ತು. ಆದರೆ ರೈಲ್ವೆ ಕ್ರಾಸಿಂಗ್ ಗೇಟ್-3 ಮುಚ್ಚಲು ಅನುಮತಿ ನೀಡಿಲ್ಲ ಎಂದು ರೈಲ್ವೆ ಇಲಾಖೆ ಫ್ಲೈ ಓವರ್ ಬಂದ್ ಮಾಡಿತ್ತು. ಈ ನಡೆಗೆ ಪ್ರಯಾಣಿಕರು, ವಾಹನ ಚಾಲಕರು ಮತ್ತು ಸಾರ್ವಜನಿಕರು ಆಕ್ರೋಶಗೊಂಡಿದ್ದರು.
ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಜಿಲ್ಲಾಡಳಿತದ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದವು. ಹಾಗಾಗಿ ತೀವ್ರ ಆಕ್ರೋಶ, ವಿರೋಧಕ್ಕೆ ಮಣಿದ ಜಿಲ್ಲಾಡಳಿತ, ಒತ್ತಡಕ್ಕೆ ಮಣಿದು ಇಂದು ರಾತ್ರಿ ಫ್ಲೈ ಓವರ್ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಂದ್ ಮಾಡಿದ್ದ ರೈಲ್ವೆ ಮೇಲ್ಸೇತುವೆ ಮತ್ತೆ ಸಂಚಾರ ಮುಕ್ತವಾಗಿದೆ.
ಗಿಲ್ಲಿ ದಾಂಡು ಆಡಿ ಎಂಜಾಯ್ ಮಾಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ: ವೀಡಿಯೋ ವೈರಲ್
ಒಂದು ಫೋಟೋ ಅಪ್ಲೋಡ್ ಮಾಡಿ ಡಿವೋರ್ಸ್ ವದಂತಿಗೆ ಉತ್ತರಿಸಿದ ಐಶ್ವರ್ಯಾ ರೈ
ಪದೇ ಪದೇ ಒಂದೇ ಪ್ರಾಡಕ್ಟ್ ಲಾಂಚ್ ಮಾಡಿದ್ದಕ್ಕೆ ಕಾಂಗ್ರೆಸ್ ಸೋತಿದೆ: ರಾಹುಲ್ ಬಗ್ಗೆ ಮೋದಿ ವ್ಯಂಗ್ಯ



