Hubli News: ಹುಬ್ಬಳ್ಳಿ: ವಿದ್ಯಾನಗರ ಪೊಲೀಸರ ಭರ್ಜರಿ ಬೇಟೆಯಾಡಿದ್ದು,ನಕಲಿ ಮಧ್ಯ ತಯಾರಿಕೆಯಲ್ಲಿ ಬಳಸುವ ಸ್ಪಿರಿಟ್ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ,
500ಕ್ಕೂ ಅಧಿಕ ಲೀಟರ್ ನಕಲಿ ಮಧ್ಯ ತಯಾರಿಸುವ ಸ್ಪಿರಿಟ್ ವಶಕ್ಕೆ ಪಡೆದಿದ್ದಾರೆ.
ನಗರದ ಗ್ಯಾಂಗ್ ವೊಂದು ಮಹಾರಾಷ್ಟ್ರದಿಂದ ಸ್ಪಿರಿಟ್ ತಂದು, ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿದ್ಯಾನಗರ ಪೊಲೀಸರು, ಎಸಿಪಿ ಶಿವಪ್ರಕಾಶ್ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಜಯಂತ್ ಗೌಳಿ ನೇತೃತ್ವದ ತಂಡ ದಾಳಿ ನಡೆಸಿದೆ.
ಮಹಾರಾಷ್ಟ್ರ ರಿಜಿಸ್ಟರ್ ನಂಬರ್ ಇರುವ ಕಾರಿನಲ್ಲಿ ಅಕ್ರಮ ಸ್ಪಿರಿಟ್ ಸಾಗಾಟದ ಮಾಹಿತಿ ಪಡೆದ ಪೊಲೀಸರು ಉಣಕಲ್ಲ ಬಳಿ ವಾಹನದ ಮೇಲೆ ದಾಳಿಯನ್ನು ಮಾಡಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು ವಿದ್ಯಾನಗರ ಪೊಲೀಸರ ಕಾರ್ಯಕ್ಕೆ ಕಮೀಷನರ್ ರೇಣುಕಾ ಸುಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ?’
ಪದೇ ಪದೇ ಒಂದೇ ಪ್ರಾಡಕ್ಟ್ ಲಾಂಚ್ ಮಾಡಿದ್ದಕ್ಕೆ ಕಾಂಗ್ರೆಸ್ ಸೋತಿದೆ: ರಾಹುಲ್ ಬಗ್ಗೆ ಮೋದಿ ವ್ಯಂಗ್ಯ



