Saturday, April 12, 2025

Latest Posts

ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್‌: ಸಚಿವ ಕೆ.ಎನ್.ರಾಜಣ್ಣ

- Advertisement -

Hassan News: ಹಾಸನ: 40% ಕಮಿಷನ್ ಬಗ್ಗೆ ಮಾಜಿಸಚಿವ ಬಿ.ಶಿ.ವರಾಂ ಆರೋಪ ವಿಚಾರದ ಬಗ್ಗೆ ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು, 40% ಬಗ್ಗೆ ಹೇಳಬೇಕು ಅಂದರೆ ಯಾವನ್ ಹತ್ರನಾದರೂ ಅರ್ಧಪೈಸೆ ಲಂಚದ ವಿಚಾರವಾಗಿ ನನ್ನ ಮೇಲೆ ಆರೋಪ ಇದ್ದರೆ, ಬಂದು ಯಾವುದಾದರೂ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಹೇಳಿ ನಾನು ರಾಜಕೀಯನೇ ಬಿಟ್ಟು ಬಿಡ್ತಿನಿ.

ನಾಲಿಗೆ ಹೇಗೆ ಬೇಕಾದರೂ ತಿರುಗುತ್ತೆ. ಎಲುಬಿಲ್ಲದ ನಾಲಿಗೆ ಆಚಾರವಿಲ್ಲದೆ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ಅಂತಾರೆ. ಪ್ರಮಾಣಿಕತೆಯಲ್ಲಿ ಯಾರಿಗೇನು ನಾನು ಕಡಿಮೆಯಿಲ್ಲ. ಯಾರೆಲ್ಲಾ ಆರೋಪ ಮಾಡ್ತರಲ್ಲ, ಅವರು ಮೊದಲು ಆತ್ಮಾವಲೋಕನಾ ಮಾಡಿಕೊಳ್ಳಲಿ ಎಂದು ರಾಜಣ್ಣ ಹೇಳಿದ್ದಾರೆ.

ಕೆ.ಎನ್.ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ತರ ಆಡ್ತಿದ್ದಾರೆ ಎಂಬ ಕೆಲ ನಾಯಕರ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರ ಅಪ್ಪ ಅಂತ ಹೇಳಿ, ಅದಕ್ಕಿಂತ ಮೇಲೆ ಯಾರಾದರೂ ಇದ್ದರು ಅದಕ್ಕೂ ಅಪ್ಪನೇ. ನನ್ನ ನಡವಳಿಕೆ ಜನರು ಮೆಚ್ಚಬೇಕು ಅಷ್ಟೇ, ಯಾರು ಮುಖಂಡರು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ ಎಂದು ರಾಜಣ್ಣ ಖಡಾಖಂಡಿತವಾಗಿ ಮಾತನಾಡಿದ್ದಾರೆ.

ಹೈಕಮಾಂಡ್‌ಗೆ ಹೆದರವರಿಗೆ ನಾವೇನು ಹೇಳಲು ಆಗುತ್ತೆ ಎಂಬ ಬಿ.ಶಿವರಾಂ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಅದು ನನ್ನ ಇಷ್ಟ ನಾನು ಯಾರಿಗೆ ಹೆದರಬೇಕು ಹೆದರುತ್ತೀನಿ. ಐ ಆ್ಯಮ್ ಲಾಯಲ್, ಐ ಆ್ಯಮ್ ಒಬಿಡಿಯೆಂಟ್ ಟು ಹೈಕಮಾಂಡ್‌. ನಾಟ್ ದಿ ಸ್ಲೇವ್. ಇದನ್ನು ಪದೇ ಪದೇ ಹೇಳಿದ್ದಿನಿ. ಐ ಆ್ಯಮ್ ಲಾಯಲ್, ಐ ಆ್ಯಮ್ ಒಬಿಡಿಯೆಂಟ್ ಬಟ್ ನಾಟ್ ದಿ ಸ್ಲೇವ್ ಎಂದು ರಾಜಣ್ಣ ಹೇಳಿದ್ದಾರೆ.

ನನಗೆ ನಾನೇ ಹೈಕಮಾಂಡ್‌ ನನಗೆ ಯಾರೂ ಹೈಕಮಾಂಡ್‌ ಇಲ್ಲ. ನನ್ನ ಹೈಕಮಾಂಡ್‌ ಇರೋದು ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್‌. ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಎಲ್ಲಾ ಇದ್ದಾರೆ. ಅವರಿಗೆ ಕೊಡಬೇಕಾದ ಗೌರವ ಅವರಿಗೂ ಕೊಡ್ತೇವೆ. ಅವರು ಮಾತು ಯಾವುದು ಕೇಳಬೇಕು, ಅವರು ಮಾತು ಕೇಳ್ತೇವೆ. ಅವರು ಮಾತನ್ನು ನಾನು ಧಿಕ್ಕರಿಸಲ್ಲ. ಅಲ್ಡಿಮೆಟ್ಲಿ ಐ ಬಿಲೀವ್, ಮೈ ಹೈಕಮಾಂಡ್‌ ಮೈ ಕಾನ್ಸಟ್ಯೂಯೆನ್ಸಿ ಓಟರ್ಸ್ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ತಿದೆ. ಯಾರು ಅಭ್ಯರ್ಥಿ ಆಗಬೇಕು ಎಂದು ದೆಹಲಿಮಟ್ಟದಲ್ಲಿ ಕೂಡ ಚರ್ಚೆ ಆಗಿದೆ. ಸುರ್ಜೇವಾಲ ಅವರು ಇಂದು ಬೆಂಗಳೂರಿಗೆ ಬರ್ತಾರೆ. ಎಲ್ಲರೊಟ್ಟಿಗೆ ಚರ್ಚೆ ಮಾಡ್ತಾರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಏನು ಮಾಡುತ್ತೆ ಅವರು ಅಭ್ಯರ್ಥಿ ಆಗ್ತಾರೆ. ಹಾಸನ ಜಿಲ್ಲೆಯಲ್ಲೂ ನಾಲ್ಕೈದು ಜನ ಆಕಾಂಕ್ಷಿಗಳು ಇದ್ದಾರೆ. ಮಾಜಿ ಸಚಿವ ದಿವಂಗತ ಶ್ರೀಕಂಠಯ್ಯ ಅವರ ಮಗ ವಿಜಯ್‌ಕುಮಾರ್, ಶ್ರೇಯಸ್ ಪಟೇಲ್, ಬಿ.ಶಿವರಾಂ, ಬಾಗೂರು ಮಂಜೇಗೌಡ, ಗೋಪಾಲಸ್ವಾಮಿ ಹೀಗೆ ಹಲವರು ಇದ್ದಾರೆ. ಅಂತಿಮವಾಗಿ ಗೆಲುವೇ ಮಾನದಂಡವಾಗಿದೆ ಎಂದು ರಾಜಣ್ಣ ಹೇಳಿದ್ದಾರೆ.

ತುಮಕೂರು ಅಭ್ಯರ್ಥಿ ಮುದ್ದು ಹನುಮೇಗೌಡ ಆಗಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಮತ್ತೊಮ್ಮೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.  ನಾನು 99% ಅವರು ಅಭ್ಯರ್ಥಿ ಆಗಬಹುದು ಎಂದು ಹೇಳಿದ್ದೇನೆ ಇನ್ನೂ ಒಂದು ಪರ್ಸೆಂಟ್ ಇದೆಯಲ್ಲ. ನಾನೇನು ಅಭ್ಯರ್ಥಿ ಅಗ್ತಾರೆ ಎಂದಿದ್ದೀನಾ ಆಗಬಹುದು ಎಂದಿದ್ದೀನಿ ಅಷ್ಟೇ. ನಾನು 100% ಎಂದು ಹೇಳ್ತಿದ್ದೆ ಆದರೆ ನಾನು ಹೈಕಮಾಂಡ್ ಅಲ್ಲ. ಒಂದು ಪರ್ಸೆಂಟ್ ಆದರು ಅವರಿಗೆ ಇರಬೇಕಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ: ಈಶ್ವರಪ್ಪ ಹೇಳಿಕೆಗೆ ಪ್ರಸಾದ್ ಅಬ್ಬಯ್ಯ ತಿರುಗೇಟು

ಪರೋಕ್ಷವಾಗಿ‌ ಧಾರವಾಡ ಲೋಕಸಭಾ ಚುನಾವಣೆಯ ಸ್ಪರ್ಧೆ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಶೆಟ್ಟರ್

ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ ಕೋಲಾರ ಜೆಡಿಎಸ್ ಶಾಸಕರು

- Advertisement -

Latest Posts

Don't Miss