Thursday, November 27, 2025

Latest Posts

ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?

- Advertisement -

Sports News: ಕ್ರಿಕೇಟಿಗ ಜಡೇಜಾ ಪತ್ನಿ, ಬಿಜೆಪಿ ಶಾಸಕಿ ರಿವಾಬಳಿಂದಾಗಿ ನನ್ನ ಮಗ ನನ್ನಿಂದ ದೂರವಾದ. ಆಕೆ ಅದೇನು ಮೋಡಿ ಮಾಡಿದ್ದಾಳೋ, ನಮ್ಮ ಬಗ್ಗೆ ಜಡೇಜಾಗೆ ಅದೇನು ಹೇಳಿದ್ದಾಳೋ, ನಮ್ಮ ಮನೆ ಮುರಿದಿದ್ದಾಳೆ ಎಂದು, ಕ್ರಿಕೇಟಿಗ ರವೀಂದ್ರ ಜಡೇಜಾ ತಂದೆ, ಮಾಧ್ಯಮಗಳ ಮುಂದೆ ಎರಡು ದಿನಗಳ ಹಿಂದಷ್ಟೇ ಆರೋಪಿಸಿದ್ದರು.

ರವೀಂದ್ರ ಜಡೇಜಾ ತಂದೆ ಅನಿರುದ್ಧ ಜಡೇಜಾ, ಮಾಧ್ಯಮದ ಎದುರಿಗೆ ಹೀಗೊಂದು ಆರೋಪ ಮಾಡಿದ್ದು, ನನ್ನ ಸೊಸೆ, ರವೀಂದ್ರ ಜಡೇಜಾ ಪತ್ನಿ ರಿವಾಬಾ, ಮಾತು ಕೇಳಿ, ರವೀಂದ್ರ ನನ್ನನ್ನು ದೂರ ಮಾಡಿದ್ದಾನೆ. ಅವಳು ಮನೆ ಒಡೆಯುವ ಕೆಲಸ ಮಾಡಿದ್ದಾಳೆ. ಅದೇನೋ ಮೋಡಿ ಮಾಡಿದ್ದಾಳೋ ಗೊತ್ತಿಲ್ಲ. ಮಗ ನನ್ನಿಂದ ದೂರವಾಗಿ ವರುಷಗಳೇ ಕಳೆದಿದೆ ಎಂದು ಆರೋಪಿಸಿದ್ದರು.

ಅಷ್ಟೇ ಅಲ್ಲದೇ, ರವೀಂದ್ರ ತನ್ನ ತಂದೆ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದಾನೆ. ಅವನು ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ನಾವೆಲ್ಲ ಒಂದೇ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದೆವು. ಆದರೆ ಮದುವೆಯಾಗಿ 3 ತಿಂಗಳು ಕಳೆದ ಬಳಿಕ, ರವೀಂದ್ರ ನನ್ನೊಂದಿಗೆ ಮಾತನಾಡುವುದನ್ನೇ ಬಿಟ್ಟ. ಇದೀಗ 5 ವರ್ಷದಿಂದ ನಾನು ಇದೇ ಫ್ಲ್ಯಾಟ್‌ನಲ್ಲಿ 20 ಸಾವಿರ ಪಿಂಚಣಿಯೊಂದಿಗೆ ಬದುಕುತ್ತಿದ್ದೇನೆ ಎಂದು ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ರವೀಂದ್ರ ಜಡೆಜಾ. ಅಪ್ಪ ಮಾಡುತ್ತಿರುವ ಆರೋಪವೆಲ್ಲವೂ ಸುಳ್ಳು. ಇದು ನನ್ನ ಪತ್ನಿ ಪರ ನಡೆದಿರುವ ಕುತಂತ್ರ. ನಾನೂ ಎಲ್ಲವನ್ನೂ ಹೇಳಬಲ್ಲೆ. ಆದರೆ, ಕುಟುಂಬದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸುವ ಅವಶ್ಯಕತೆ ನನಗಿಲ್ಲವೆಂದು ಪತ್ನಿ ಪರ ಬ್ಯಾಟಿಂಗ್ ಮಾಡಿದ್ದರು.

ಇಂದು ರವೀಂದ್ರ ಪತ್ನಿ ಇದಕ್ಕೆ ಪ್ರತಿಕ್ರಿಯಿಸಿದ್ದು, ಇದೆಲ್ಲ ಮೊದಲೇ ಪ್ಲಾನ್ ನಡೆದಿರುತ್ತದೆ. ನಾನು ಮತ್ತು ನನ್ನ ಪತಿ ಬಿಜೆಪಿಗೆ ಸಪೋರ್ಟ್ ಮಾಡುತ್ತೇವೆ. ಆದರೆ ರವೀಂದ್ರ ಅವರ ತಂದೆಗೆ ಇದು ಇಷ್ಟವಿಲ್ಲ. ರವೀಂದ್ರ ಜಡೇಜಾ ತಂಗಿ ಕಾಂಗ್ರೆಸ್ ಪರ ಚುನಾವಣೆಗೆ ನಿಲ್ಲುತ್ತಾಳೆ. ಹಾಗಾಗಿ ಮಗ ಪತ್ನಿಯ ಬದಲು ತಂಗಿಗೆ ಸಪೋರ್ಟ್ ಮಾಡಲಿ ಎಂದು ಅವರ ತಂದೆ ಬಯಸಿದ್ದರು. ಹಾಗಾಗಿಯೇ ನನ್ನ ವಿರುದ್ಧ ಈ ರೀತಿ ಆರೋಪ ಮಾಡಿ, ನನ್ನ ಹೆಸರು ಹಾಳು ಮಾಡಲು ನೋಡಿದ್ದಾರೆಂದು ಆರೋಪಿಸಿದ್ದಾರೆ.

ಅಲ್ಲದೇ ಮದುವೆಯೊದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರ ಮಾಡಬೇಕು. ಕಾಂಗ್ರೆಸ್‌ನಿಂದ ಎಲೆಕ್ಷನ್‌ಗೆ ನಿಲ್ಲಬೇಕು ಎಂದು ನನ್ ಮಾವ ಒತ್ತಡ ಹೇರುತ್ತಿದ್ದರು. ಹಾಗಾಗಿ ನಾವು ಅವರಿಂದ ದೂರ ಬರಬೇಕಾಯಿತು ಎಂದು ರಿವಾಬ ಹೇಳಿದ್ದಾರೆ.

ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ ಆಟಗಾರ ಸೌರಭ್ ತಿವಾರಿ

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನ

ಇನ್ನೆಂದೂ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದ ಟೆನ್ನಿಸ್ ತಾರೆ.. ಕಾರಣವೇನು..?

- Advertisement -

Latest Posts

Don't Miss