Hubli News: ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬಂತೆ ಆಸ್ತಿ ಎಷ್ಟಿದ್ದರೇನು ? ಸಾರ್ವಜನಿಕರ ಆಸ್ತಿ ಕರವನ್ನು ಸಮರ್ಪಕವಾಗಿ ಸಂಗ್ರಹಿಸದಿದ್ದರೆ ಪಾಲಿಕೆಯ ಗತಿ ಏನು. ಅತಿ ದೊಡ್ಡ ಸ್ಥಳೀಯ ಸಂಸ್ಥೆಯಾದರೂ ಅದಕ್ಕೆ ಸಂದಾಯವಾಗುವ ತೆರಿಗೆ ಹಣ ಮಾತ್ರ ಅಷ್ಟಕ್ಕಷ್ಟೆ.
ಹೌದು, ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ತೆರಿಗೆಗೆ ಒಳಪಡುವ 1,80,450 ವಸತಿ, 33,732 ವಾಣಿಜ್ಯ ಮಳಿಗೆ ಹಾಗೂ 1,10,926 ಖಾಲಿ ನಿವೇಶನ ಸೇರಿದಂತೆ ಒಟ್ಟು 3 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಇದರೊಂದಿಗೆ ಪಾಲಿಕೆಗೆ ಸಂಬಂಧಿಸಿದ 1513 ವಾಣಿಜ್ಯ ಬಾಡಿಗೆ ಮಳಿಗೆಗಳಿದ್ದು, ಇವುಗಳು ಪಾಲಿಕೆಯ ತೆರಿಗೆ ಆದಾಯದ ಮೂಲಗಳಾಗಿವೆ.
ಇವುಗಳಿಂದ 2023-24ನೇ ಸಾಲಿನಲ್ಲಿ 3.86ಕೋಟಿ ತೆರಿಗೆ ಸಂಗ್ರಹ ಗುರಿ ಇತ್ತು. ಇದರಲ್ಲಿ 2.86 ಕೋಟಿ ತೆರಿಗೆಯನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಇನ್ನುಳಿದ 1 ಕೋಟಿ ರೂಪಾಯಿ ಹಾಗೂ ಹಲವು ವರ್ಷಗಳ ಬಾಕಿ ತೆರಿಗೆ ಮತ್ತು ದಂಡ ಸೇರಿ 27 ಕೋಟಿ ರೂ.ಪಾಯಿಗೂ ಅಧಿಕ ತೆರಿಗೆ ಹಣ ಪಾಲಿಕೆಗೆ ಸಂದಾಯವಾಗಬೇಕಿದೆ.
ಇನ್ನು, ತೆರಿಗೆ ವಂಚಕರಿಂದ ಕೋಟ್ಯಂತರ ರೂ. ತೆರಿಗೆ ಹಣ ಸಂಗ್ರಹಿಸಲು ಪಾಲಿಕೆ ಹೆಣಗಾಡುತ್ತಿದೆ. ಗಣ್ಯರು, ವಾಣಿಜ್ಯೋದ್ಯಮಿಗಳು ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳ ಅಸಹಕಾರದಿಂದ ಪಾಲಿಕೆಯ ಉದ್ದೇಶ ಈಡೇರುತ್ತಿಲ್ಲ. ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಹಾನುಭಾವರಿಂದ ಪಾಲಿಕೆ ಬಡವಾಗುತ್ತಿದೆ. ಇದರ ನೇರ ಪರಿಣಾಮ ಮಹಾನಗರದ 11 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಬೀಳುತ್ತಿದೆ. ಪಾಲಿಕೆಗೆ ನಿರೀಕ್ಷಿತ ಮೊತ್ತ ಬಾರದ ಕಾರಣ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ.
ಬಡವರು ಬಡವರಾಗಿ ಉಳಿಯುವುದಕ್ಕೆ ಕಾರಣಕರ್ತರೇ ಕಾಂಗ್ರೆಸ್‌ನವರು: ಬಿ.ವೈ.ವಿಜಯೇಂದ್ರ
ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಸತ್ಯವನ್ನು ಹುದುಗಿಸಿಡಲು ಯತ್ನಿಸುತ್ತದೆ: ಸಿಎಂ ಸಿದ್ದರಾಮಯ್ಯ