Hassan News: ಹಾಸನ : ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದ್ದು, ಇವತ್ತು ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿಗೆ. ಆ ಸಮಸ್ಯೆಗಳ ಪ್ರಾಥಮಿಕ ಅಂಶಗಳನ್ನು ತೆಗೆದುಕೊಂಡು ಬಜೆಟ್‌ನಲ್ಲಿ ನೆರಳಾಗಿ ನಿಲ್ಲುತ್ತದೆ ಎಂದುಕೊಂಡಿದ್ದೆ. ಇವತ್ತು ಅದಕ್ಕೆಲ್ಲಾ ಈ ಬಜೆಟ್ ನಿರಾಸೆ ತಂದಿದೆ ಎಂದಿದ್ದಾರೆ.
ರೈತರು ಬಹಳ ಸಂಕಷ್ದಲ್ಲಿದ್ದಾರೆ, ತೊಂದೆಯಲ್ಲಿದ್ದಾರೆ. ಅವರಿಗೆ ವಿಶೇಷ ಸ್ಕೀಂ ತಂದು ನೆರವು ನೀಡಬೇಕಿತ್ತು. ಈ ಬಜೆಟ್ ಕೇವಲ ಅವರ ಗ್ಯಾರೆಂಟಿಗಳ ಶಕ್ತಿಗೆ ಸೀಮಿತವಾಗಿದೆ. ಯಾವುದೇ ರೈತಾಪಿ ವರ್ಗ, ಸಾಮಾಜಿಕ ಕಳಕಳಿ, ಅಭಿವೃದ್ಧಿಗಾಗಿ ಇರುವ ಬಜೆಟ್ ಅಲ್ಲ. ನನ್ನ ನಿರೀಕ್ಷೆ ಸುಳ್ಳಲ್ಲ, ಇದು ಫೇಲ್ ಬಜೆಟ್, ಇವತ್ತು ಅದಕ್ಕೆ ಅರ್ಥ ಸಿಗುವ ರೀತಿ ಮಂಡನೆ ಮಾಡಿದ್ದಾರೆ. ಇದನ್ನು ನಾವೆಲ್ಲಾ ಖಂಡಿಸಬೇಕು ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಇದು ಸಂಪೂರ್ಣ ಎಲ್ಲರೂ ತಿರಸ್ಕಾರ ಮಾಡುವ ಬಜೆಟ್. ಇದು ಸಂಪೂರ್ಣ ಫೇಲ್ಯೂರ್ ಆಗಿರುವ ಬಜೆಟ್. ನಮ್ಮ ಹಾಸನ ಜಿಲ್ಲೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ನಡೆಯುತ್ತಿರುವ ಅಭಿವೃದ್ಧಿಗು ಹಣ ಕೊಟ್ಟಿಲ್ಲ. ನಮ್ಮ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ಜಿಲ್ಲೆಯ ಎಲ್ಲಾ ಜನರಿಗೂ ನಿರಾಸೆ ಉಂಟುಮಾಡಿದೆ. ನಮ್ಮ ಜಿಲ್ಲೆಯ ಮೇಲೆ ಈ ಸರ್ಕಾರಕ್ಕೆ ಎಷ್ಟು ಅಭಿಮಾನ, ಪ್ರೀತಿ ಇದೆ ಅಂತ ಈ ಸರ್ಕಾರ ತೋರ್ಸಿದ್ದಾರೆ. ನಾನು ಸಂಸದನಾಗಿ ಈ ಬಜೆಟ್ ತಿರಸ್ಕಾರ ಮಾಡ್ತಿನಿ. ಆರ್ಥಿಕ ಸ್ಥಿತಿ ಕುಗ್ಗಿರುವುದು ಎದ್ದು ಕಾಣ್ತಿದೆ ಎಂದು ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬಜೆಟ್ ವಿರುದ್ಧ ಕಿಡಿಕಾರಿದ್ದಾರೆ.
ನಾವು ಮಾಡಿರುವ ಕೆಲಸ, ನಾವು ತಂದಿರುವ ಯೋಜನೆಗಳು ನಮ್ಮ ಕೈ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ
ಸಿದ್ದರಾಮಯ್ಯ ಕನ್ನಡಿಗರ ಕಿವಿಗೆ ಹೂವಿಟ್ಟಿದ್ದಾರೆ. ಇದು ನಾಳೆ ಬಾ ಸರ್ಕಾರದ ಬಜೆಟ್: ಹೆಚ್.ಡಿ.ಕುಮಾರಸ್ವಾಮಿ
ಬಜೆಟ್ ಮಂಡನೆ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಅಭಿನಂದನೆ ತಿಳಿಸಿದ ಬಿಜೆಪಿ ನಾಯಕ ಸೋಮಶೇಖರ್