Cricket News: ಕ್ರಿಕೇಟಿಗ ಯುವರಾಜ್ ಸಿಂಗ್ ಮನೆಯಲ್ಲಿ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿದೆ. ಪಂಚಕುಲದಲ್ಲಿರುವ ಯುವರಾಜ್ ಸಿಂಗ್ ತಾಯಿ ಶಬ್ನಮ್ ಸಿಂಗ್ ಮನೆಯಲ್ಲಿ ಕಳ್ಳತನಾಗಿದ್ದು, 6 ತಿಂಗಳ ಹಿಂದೆ ನಡೆದ ಪ್ರಕರಣ ಇದಾಗಿದ್ದು, ಮನೆಗೆಲಸದವರ ಮೇಲೆ ದೂರು ದಾಖಲಿಸಲಾಗಿದೆ.
ಲಕ್ಷ ಬೆಲೆಬಾಳುವ ಚಿನ್ನ 75 ಸಾವಿರ ರೂಪಾಯಿ ನಗದು ಕಳ್ಳತನವಾಗಿದೆ ಎಂದು ಶಬ್ನಂ ಸಿಂಗ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇವರ ಮನೆಯಲ್ಲಿ ಇಬ್ಬರು ಮನೆಗೆಲಸದವರು ಇದ್ದು, ಇವರ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ. ಲಲಿತಾ ದೇವಿ, ಶೈಲೇಂದ್ರ ದಾಸ್ ಎಂಬ ಮನೆಗೆಲಸದವರ ಮೇಲೆ ಕಳ್ಳತನದ ಆರೋಪ ಮಾಡಲಾಗಿದೆ.
ಶಬ್ನಮ್ ಸಿಂಗ್ ತಮ್ಮ ಮನೆ ಬಿಟ್ಟು, ಇನ್ನೊಂದು ಮನೆಯಲ್ಲಿ ವಾಸವಿರಲು ಹೋದ ವೇಳೆ, ಕಳ್ಳತನವಾದ ಸಂಶಯವಿದೆ. ದೀಪಾವಳಿಯ ದಿನ ಮನೆಗೆಲಸದವರು ಮನೆ ಬಿಟ್ಟು ಹೋಗಿದ್ದು, ಡ್ರಾವರ್‌ನಲ್ಲಿದ್ದ ಬೀಗ ಕೂಡ ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಕೆಲ ದಿನಗಳ ಹಿಂದೆ ಸೌರವ್ ಗಂಗೋಲಿ ಮನೆಯಲ್ಲಿಯೂ ಮೊಬೈಲ್ ಕಳ್ಳತನವಾಗಿದ್ದು. ಅವರು ದೂರು ನೀಡಿದ್ದು, ಮನೆಗೆ ಪೇಂಟ್ ಮಾಡಲು ಬಂದವರ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.
‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’
‘ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಲ್ಲ ಅಂತ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ’
‘ನಮ್ಮ ಹಾಸನ ಜಿಲ್ಲೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಸಂಪೂರ್ಣ ಫೇಲ್ಯೂರ್ ಆಗಿರುವ ಬಜೆಟ್’

