Manglore News: ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಸೇರಿ, ಹಲವು ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಸಮಾವೇಶಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನಮ್ಮದು ಬದುಕನ್ನು ಕಟ್ಟಿರುವಂಥ ಪಕ್ಷ. ಹಲವರ ಬದುಕಿನಲ್ಲಿ ಬದಲಾವಣೆ ಮಾಡಿರುವಂಥ ಪಕ್ಷ. ಈ ವರ್ಷದ ಬಜೆಟ್ ಕೂಡ ಅಷ್ಟೇ ಉತ್ತಮವಾಗಿದೆ. ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣ ಸೇರಿದಂತೆ ವಿವಿಧ ಜನಪರ ಯೋಜನೆಗಳ ಆಧಾರದ ಮೇಲೆ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಸಾರ್ಥಕತೆ ನಮ್ಮದು ಎಂದು ಡಿಕೆಶಿ ಹೇಳಿದ್ದಾರೆ.
ಅಲ್ಲದೇ ಈ ಬಾರಿ ಲೋಕಸಭೆ ಎಲೆಕ್ಷನ್‌ಗೆ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಣಕ್ಕಿಳಿದರೂ ಏನೂ ತೊಂದರೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದ ಆಲೋಚನೆಗಳಿದೆ. ಕಾಂಗ್ರೆಸ್ ವಿರುದ್ಧ ಯಾರೇ ಕಣಕ್ಕಿಳಿದರೂ ನಾವು ಎದುರಿಸಲು ಸಿದ್ದರೆಂದು ಎಂದು ಡಿಕೆಶಿ ಹೇಳಿದ್ದಾರೆ.
ಅಲ್ಲದೇ, ದೇವೇಗೌಡರು, ಕುಮಾರಸ್ವಾಮಿ ವಿರುದ್ಧವೇ ಎಲೆಕ್ಷನ್‌ಗೆ ನಿಂತವರು ನಾನು. ಅನಿತಾ ಕುಮಾರಸ್ವಾಮಿ ಅವರೆದುರು ಎಲೆಕ್ಷನ್‌ಗೆ ನಿಂತು ಸುರೇಶ್ ಗೆದ್ದಿದ್ದಾನೆ. ಯಾರೇ ನಿಂತರು ಸುರೇಶ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾನೆ. ಸುರೇಶ್ ದೆಹಲಿ ಎಂಪಿ ಅಲ್ಲ, ಹಳ್ಳಿ ಸಂಸದ ಎಂದು ಡಿಕೆಶಿ ಸಹೋದರನನ್ನು ಹಾಡಿ ಹೊಗಳಿದ್ದಾರೆ.
‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’
ಆಸ್ಪತ್ರೆಗೆ ದಾಖಲಾದ ಪ್ರಿಯಾಂಕಾ ವಾದ್ರಾ: ಉತ್ತರಪ್ರದೇಶ ನ್ಯಾಯ ಯಾತ್ರೆಗೆ ರಾಹುಲ್ ಗಾಂಧಿಗೆ ವಿಶ್