Uttara Pradesh: ಉತ್ತರಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯತ್ನಿಸಿದ ಇಬ್ಬರನ್ನು, ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಮುಜಾಫರಾಬಾದ್‌ನಲ್ಲಿ ಭಯೋತ್ಪಾದಕ ಸಂಚು ರೂಪಿಸಲು ಇಬ್ಬರು ಮುಂದಾಗಿದ್ದು, ಪೊಲೀಸರಿಗೆ ಈ ಬಗ್ಗೆ ಸಂಶಯವಿದ್ದ ಕಾರಣ, ತಂಡ ರಚಿಸಿ, ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ. ಜಾವೇದ್ ಶೇಖ್ ಮತ್ತು ಮಜೀದ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 4 ಬಾಂಬ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ಸೇರಿ, ಸುಲಭವಾಗಿ ಕೈಗೆಟಕುವ ವಸ್ತುಗಳನ್ನು ಬಳಸಿ, ಬಾಂಬ್ ತಯಾರಿಸಿದ್ದರು. ಜಾವೇದ್ ರೇಡಿಯೋ ರಿಪೇರಿ ಅಂಗಡಿ ಹೊಂದಿದ್ದು, ಇವರ ಕುಟುಂಬಸ್ಥರು ಪಟಾಕಿ ತಯಾರಿಸುತ್ತಿದ್ದರು. ಇದೇ ಕೆಲಸವನ್ನು ತಿಳಿದು, ಇವರಿಬ್ಬರು ಸೇರಿ ಬಾಂಬ್ ತಯಾರಿಸಿದ್ದಾರೆ.
ಇನ್ನು ಈ ಕಿರಾತಕರ ಕೆಲಸದ ಹಿಂದೆ ಓರ್ವ ಹೆಣ್ಣಿನ ಕೈವಾಡವಿದೆ ಎನ್ನಲಾಗಿದ್ದು, ಆಕೆ ಬಾಂಬ್ ತಯಾರಿಸಲು ಹೇಳಿದ್ದಕ್ಕೆ ನಾವು ಬಾಂಬ್ ತಯಾರಿಸಿದ್ದೇವೆ ಎಂದು, ಜಾವೇದ್ ಮತ್ತು ಮಜೀದ್ ಹೇಳಿದ್ದಾರೆ. ಅಲ್ಲದೇ, ಮುಜಾಫರಾಬಾದ್‌ನಲ್ಲಿ ಈ ಮೊದಲು ಬಾಂಬ್ ಸ್ಪೋಟಿಸಲು ಇವರಿಬ್ಬರು ತಯಾರಿ ನಡಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷವಾದರೂ ಬಾಂಬ್ ಸ್ಪೋಟಿಸಬೇಕು ಎಂದು ಇವರಿಬ್ಬರು ತಯಾರಾಗಿದ್ದರು.
ಅಲ್ಲದೇ, ಹಲವರಿಗೆ ಬಾಂಬ್ ತಯಾರಿಸಿ ಸರರಬರಾಜು ಕೂಡ ಮಾಡಿದ್ದರು. ಆದರೆ ಉತ್ತರಪ್ರದೇಶದ ಪೊಲೀಸ್ ಅಧಿಕಾರಿಗಳು ಈ ದುರುಳರ ಪ್ಲಾನ್ ಫ್ಲಾಪ್ ಮಾಡಿದ್ದಾರೆ. ಸದ್ಯ ಇಬ್ಬರನ್ನೂ ವಿಚಾರಣೆ ಮಾಡುತ್ತಿದ್ದು, ಈ ಕೆಲಸ ಹಿಂದಿರುವ ಹೆಣ್ಣು ಯಾರು..? ಆಕೆ ಪ್ಲಾನ್ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್
ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ
ಪುಟ್ಟ ಅಂಗಡಿಗೆ ಹೋಗಿ ಚಾಕೋಲೇಟ್, ಐಸ್‌ಕ್ರೀಮ್ ಖರೀದಿಸಿದ ರಾಕಿಂಗ್ ಸ್ಟಾರ್ ಯಶ್..