Tumakuru News: ತುಮಕೂರು: ತುಮಕೂರನಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಆಸ್ತಿಗಾಗಿ ಹೆತ್ತ ತಾಯಿಯನ್ನ ಮಕ್ಕಳು ಗೃಹ ಬಂಧನದಲ್ಲಿ ಇಟ್ಟಿದ್ದಾರೆ.
ಆಸ್ತಿಗಾಗಿ ಹೆತ್ತ ತಾಯಿಯನ್ನ ಮಗ ಸೊಸೆ ಸೇರಿ ದಿಗ್ಭಂಧನದಲ್ಲಿ ಇರಿಸಿದ್ದಾರೆ. ತುಮಕೂರಿನ ಶಿರಾ ಗೇಟ್ ಸಾಡೆಪುರದಲ್ಲಿ ಈ ಘಟನೆ ನಡೆದಿದ್ದು, ಕಳೆದ 11 ತಿಂಗಳಿನಿಂದ ಮಗ ಸೊಸೆ ಸೇರಿ 80 ವರ್ಷದ ಪಂಕಜಾಕ್ಷಿಯನ್ನು ಗೃಹ ಬಂಧನದಲ್ಲಿ ಇರಿಸಿದ್ದಾರೆಂಬ ಆರೋಪವಿದೆ.
ಪಂಕಜಾಕ್ಷಿ ನಿವೃತ್ತ ಸಿಡಿಪಿಓ ಆಗಿದ್ದು, 12 ಮನೆಗಳು ಸೇರಿ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಇನ್ನು ಈಗಾಗಲೇ ಪಂಕಜಾಕ್ಷಿಯ ಬಳಿ ಬೆಲೆ ಬಾಳುವ ಒಡವೆಗಳಿದ್ದು, ಅವುಗಳನ್ನು ಮಗ ಸೊಸೆ ಪಡೆದುಕೊಂಡಿದ್ದಾರೆ. ಇದೀಗ ಪಂಕಜಾಕ್ಷಿ ಹೆಸರಿನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ಮಾಡಬೇಕು ಎಂದು ಮಗ ಸೊಸೆ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ.
ಮನೆಯ ಗೇಟಿಗೆ ಬೀಗ ಹಾಕಿ, ಮಗ ಜೇನ್ ಸುರೇಶ್ ಮತ್ತು ಸೊಸೆ ಆಶಾ ಪಂಕಜಾಕ್ಷಿಯನ್ನು ಮನೆಯಲ್ಲೇ ಕೂಡಿ ಹಾಕಿದ್ದಾರೆ. ಆದರೆ ಪಂಕಜಾಕ್ಷಿ ಸ್ಥಳೀಯರ ಸಹಾಯ ತೆಗೆದುಕೊಂಡು, ಸಾಂತ್ವನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಮನೆಗೆ ತುಮಕೂರು ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರ ಅಧಿಕಾರಿಗಳು ಭೇಟಿ ನೀಡಿ,ವೃದ್ಧೆಯನ್ನು ರಕ್ಷಿಸಿ, ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ರಕ್ಷಣೆ ನೀಡಿದ್ದಾರೆ.
ಅಧಿಕಾರಿಗಳು ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ನೀಡಿ, ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳು ಬಾರದ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾರಿಗೆ ಈ ಬಗ್ಗೆ ದೂರು ನೀಡಿದ ಬಳಿಕ, ವೃದ್ಧೆಯನ್ನು ಪುನಃ ಮನೆಗೆ ಕರೆದೊಯ್ದು ಬಿಡಲಾಾಗಿದೆ.
ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ
ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್




