Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, .ಸಂತೋಷ ಲಾಡ್ ಸುಪ್ರೀಂ ಕೋರ್ಟ್ ಗಿಂತ ಮೇಲಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಏನಾಗಿದೆ ಅಂತ ಅರ್ಥವಾಗುತ್ತಿಲ್ಲ. ಸಂತೋಷ್ ಲಾಡ್ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಮೆಚ್ಯೂರ್ ಆಗಿ ಮಾತಡಲಿ ಎಂದು ಜೋಶಿ ಹೇಳಿದ್ದಾರೆ.
ಅವರು ಅಪ್ರಬುದ್ಧ ಹೇಳಿಕೆ ಯಾಕೆ ನೀಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಹೊಂದಿದೆ. ಮನುಷ್ಯನಿಗೆ ಶ್ರದ್ಧೆ, ಸ್ವಾಭಿಮಾನ, ಆತ್ಮಾಭಿಮಾನ ಮುಖ್ಯ. ಅಪಮಾನವನ್ನು ಯಾರು ಸಹಿಸಲಿಲ್ಲ. ಚರ್ಚ್, ಮಸೀದಿ ಕಟ್ಟುವುದರಿಂದ ಬಡತನ ನಿವಾರಣೆ ಆಗುತ್ತಾ ಅಂತ ಕೇಳಬೇಕು. ಹೊಟ್ಟೆಯಲ್ಲಿ ಹಿಂದುಗಳ ಮತ್ತು ರಾಮನ ಬಗ್ಗೆ ಕಿಚ್ಚು ಯಾಕೆ..? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಇದು ಸರ್ಕಾರದ ಮುಟ್ಠಾಳತನದ ವರ್ತನೆ. ಇದು ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ಪರಮಾವಧಿ. ಇದು ರಾಷ್ಟ್ರ ಕವಿ ಕುವೆಂಪು ಅವರಿಗೆ ಮಾಡಿರುವ ಅಪಮಾನ. ಹಾಗಿದ್ದ್ರೆ ಕುವೆಂಪು ಜಾತ್ಯಾತೀತ ವ್ಯಕ್ತಿ ಅಲ್ವಾ..? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆಕೋರರನ್ನು ಅಮಾಯಕರು ಅಂತ ಯಾರು ಹೇಳಿದ್ದು, ನ್ಯಾಯಾಲಯದಲ್ಲಿ ಸರ್ಕಾರ ಸರಿಯಾಗಿ ವಾದ ಮಂಡಿಸಿಲ್ಲ. ಪರೋಕ್ಷವಾಗಿ ಜಾಮೀನಿಗೆ ಸರ್ಕಾರ ಸಮ್ಮತಿ ನೀಡಿದೆ. ಮುಂದೆ ಇಂತಹ ಘಟನೆ ನಡೆದಾಗ ಅವರಿಗೆ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ: ಪ್ರಧಾನಿಗೆ ಲಾಡ್ ಸವಾಲ್