Saturday, July 12, 2025

Latest Posts

ಮನೆ ಮುಂದೆ ನಿಲ್ಲಿಸಿದ ನೀರಿನ ಟ್ಯಾಂಕರ್ ಕದ್ದ ಕಿಲಾಡಿಗಳು: ಖದೀಮರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆ

- Advertisement -

Dharwad News: ಬೇಸಿಗೆ ಶುರುವಾಗುವ ಮೂದಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇದರ ಮಧ್ಯೆ ಹುಬ್ಬಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ನೀರಿನ ಟ್ಯಾಂಕರ್ನ್ನು ಕಳ್ಳತನ ಮಾಡಿದ್ದಾರೆ. ಖದೀಮರ ಕೈ ಚಳಕ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು ಎರಡು ಲಕ್ಷ ಮೌಲ್ಯದ ನೀರಿನ ಟ್ಯಾಂಕರ್ ಇದಾಗಿದ್ದು, ಜಮೀನಿಗೆ ನೀರು ಹಾಯಿಸಲು‌ ಇಟ್ಟುಕೊಂಡಿದ್ದರು.

ಬೇಸಿಗೆ ಶುರುವಾಗುವುದರೊಳಗೆ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜೊತೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಬೆಲೆಯನ್ನು ಏರಿಸಲಾಗಿದೆ. ಈ ಮಧ್ಯೆ ಹುಬ್ಬಳ್ಳಿ(hubballi) ತಾಲೂಕಿನ‌ ಅದರಗುಂಚಿ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ ನೀರಿನ ಟ್ಯಾಂಕರ್ನ್ನು ಖದೀಮರ ಕಳ್ಳತನ ಮಾಡಿದ್ದಾರೆ. ಗ್ರಾಮದ ರೈತ ಶಿವಲಿಂಗಪ್ಪ ರೇವಣಕರ ಎಂಬುವವರಿಗೆ ಸೇರಿದ ಸುಮಾರು ಎರಡು ಲಕ್ಷ ಮೌಲ್ಯದ ನೀರಿನ ಟ್ಯಾಂಕರ್ ಇದಾಗಿದ್ದು, ಜಮೀನಿಗೆ ನೀರು ಹಾಯಿಸಲು‌ ಇಟ್ಟುಕೊಂಡಿದ್ದರು.

ಖದೀಮರ ಕೈ ಚಳಕ ಸಿಸಿಕ್ಯಾಮೆರಾದಲ್ಲಿ ಸೆರೆ
ಇನ್ನು ನೀರಿನ ಟ್ಯಾಂಕರ್ ಕಳ್ಳತನ ಮಾಡಿಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರಯಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಟ್ಯಾಂಕರ್ನ್ನು ಟ್ರ್ಯಾಕ್ಟರ್ನಿಂದ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೈತ ಶಿವಲಿಂಗಪ್ಪ ದೂರು ದಾಖಲಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಚಲಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ನಟ ಜಗ್ಗೇಶ್ ನಿಂದನೆಗೆ ವರ್ತೂರು ಸಂತೋಷ್ ಹೇಳಿದ್ದೇನು..?

ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ: ಪ್ರಧಾನಿಗೆ ಲಾಡ್ ಸವಾಲ್

- Advertisement -

Latest Posts

Don't Miss