Dharwad News: ಧಾರವಾಡ: ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಧಾರವಾಡದ ಯುವಕನೋರ್ವ, ಸೈಕಲ್ ಮೂಲಕ ರಾಜ್ಯ ಸುತ್ತಲು ಹೊರಟಿದ್ದಾನೆ.
ದೇಶ ಉಳಿಸಲು ಬಿಜೆಪಿ ಗೆ ಮತ ನೀಡಿ ಎಂದು ಭರತ್ ಜೈನ್ ಎಂಬ ಯುವಕ ಸೈಕಲ್ ಸವಾರಿ ಶುರು ಮಾಡಿದ್ದಾನೆ. ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಭರತ್, ಧಾರವಾಡ ಜಿಲ್ಲೆಯಿಂದ ಯಾತ್ರೆ ಕೈಗೊಂಡು, ಸೈಕಲ್‌ನಲ್ಲಿಯೇ, ಇಡೀ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ, ಮೋದಿ ದೇಶಕ್ಕಾಗಿ ಮಾಡಿದ ಕಾರ್ಯದ ಬಗ್ಗೆ ವಿವರಿಸಿ, ಅವರನ್ನು ಗೆಲ್ಲಿಸುವಂತೆ ಸಂದೇಶ ನೀಡಲಿದ್ದಾರೆ.
ಭರತ್, ಧಾರವಾಡದ ಪಿ ಅಂಡ್ ಪಿ ಟ್ರಾವೆಲ್ಸ್ ನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಭರತ್ ತಮ್ಮ ಸೈಕಲ್ ಸವಾರಿಯನ್ನು ಪೌರ ಕಾರ್ಮಿಕರಿಂದ ಚಾಲನೆ ಕೊಡಿಸುವ ಮೂಲಕ ಶುರು ಮಾಡಿದ್ದಾರೆ. ಧಾರವಾಡದ ವಾರ್ಡ್ ನಂಬರ್ 21ರ ಪೌರಕಾರ್ಮಿಕರು, ಭರತ್ ಅವರ ಸೈಕಲ್ ಸವಾರಿಗೆ ಚಾಲನೆ ನೀಡಿದ್ದಾರೆ. ನಗರದ ಪಿ ಆ್ಯಂಡ್ ಪಿ ಟ್ರಾವೆಲ್ಸ ಕಛೇರಿಯಿಂದ ಭರತ್ ಜೈನ್ ಹೊರಟಿದ್ದು, ಇಂದು ಮುಂಜಾನೆ 6:30ಕ್ಕೆ ಹೊರಟು ರಾಜ್ಯಾದ್ಯಂತ ಸೈಕಲ್ ಮೂಲಕ ಸವಾರಿ ಮಾಡಲಿದ್ದಾರೆ.
ನಟ ಜಗ್ಗೇಶ್ ಕ್ಷಮೆ ಕೇಳದಿದ್ದಲ್ಲಿ ಮನೆಗೆ ಮುತ್ತಿಗೆ: ವರ್ತೂರು ಸಂತೋಷ್ ಪರ ಅಭಿಮಾನಿಗಳು
ಬಿಜೆಪಿಯವರು ಅಗತ್ಯ ಬಿದ್ದಂತೆ ಜಾತ್ಯತೀತತೆ ಬಗ್ಗೆ ಮಾತಾಡ್ತಾರೆ: ಬರಹ ಬದಲಾವಣೆಗೆ ಹೆಬ್ಬಾಳ್ಕರ್ ಸಮರ್ಥನೆ

