National Political News: ರಾಜಸ್ಥಾನದಲ್ಲಿ ಮೊನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾದ ಹಿನ್ನೆಲೆ, ಬುಡಕಟ್ಟು ಮುಖಂಡ ಮಹೇಂದ್ರ ಜೀತ್ ಸಿಂಗ್ ಮಾಳವಿಯಾ, ಬಿಜೆಪಿ ಸೇರ್ಪಡೆಯಾಗಿದ್ದಾರೆ.
ರಾಜಸ್ತಾನದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿ.ಪಿ.ಜೋಶಿ ಮತ್ತು ಇತರ ಬಿಜೆಪಿ ನಾಯಕರು, ಮಾಳವಿಯಾ ಅವರನ್ನು ಇಂದು ಕಾರ್ಯಕ್ರಮದ ಮೂಲಕ, ಬಿಜೆಪಿಗೆ ಬರಮಾಡಿಕೊಂಡರು.
ಈ ಹಿಂದೆ ಶಾಸಕರು, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಮಾಳವಿಯಾ, ಕಾಂಗ್ರೆಸ್ ಸೋತ ಬಳಿಕ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಲು ಹಿಂಜರಿದಿದ್ದಾರೆ. ಅಲ್ಲದೇ, ಈ ಕಾರಣಕ್ಕೆ, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಹೇಂದ್ರ ಜೀತ್ ಸಿಂಗ್ ಮಾಳವಿಯಾ, ವಾಗಡ್ ಪ್ರದೇಶ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಆಸೆ. ಆ ಆಸೆ ಈಡೇರಬೇಕು ಅಂದ್ರೆ, ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಹಾಗಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ದೂರದೃಷ್ಟಿ ಇರದ ಕಾರಣ, ಆ ಭಾಗ ಇನ್ನೂ ಅಭಿವೃದ್ಧಿಯಾಗಿಲ್ಲವೆಂದು ಮಹೇಂದ್ರ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟಿಲ್ಲ: ವಿವಾದದ ಬೆನ್ನಲ್ಲೇ ಸಂತೋಷ್ ಲಾಡ್ ಸ್ಪಷ್ಟನೆ
‘ಸಂತೋಷ್ ಲಾಡ್ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಮೆಚ್ಯೂರ್ ಆಗಿ ಮಾತಾಡಲಿ’