Friday, October 24, 2025

Latest Posts

ಬಾಲಿವುಡ್ ಖ್ಯಾತ ನಟ ಋತುರಾಜ್ ಸಿಂಗ್ ನಿಧನ

- Advertisement -

Bollywood News: ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಮತ್ತು ಸಿರಿಯಲ್‌ಗಳಲ್ಲಿ ನಟಿಸಿರುವ ಖ್ಯಾತ ನಟ ಋತುರಾಜ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಿಂದಿಯ ಪ್ರಸಿದ್ಧ ಸಿರಿಯಲ್‌ಗಳಲ್ಲಿ ನಟಿಸಿದ್ದ ಋತುರಾಜ್‌ಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನಟ ಅಗಲಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಋತುರಾಾಜ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತರಲಾಗಿತ್ತು. ಆದರೆ ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಾಗಲೇ ಅವರಿಗೆ ಹೃದಯಾಘಾತವಾಗಿದೆ.

ಋತುರಾಜ್ ಅನುಪಮಾ, ಅದಾಲತ್, ಸಿಐಡಿ ಸೇರಿ ಹಲವು ಪ್ರಮುಖ ಸಿರಿಯಲ್‌ಗಳಲ್ಲಿ ನಟಿಸಿದ್ದರು. ಭದ್ರಿಕಿ ದುಲ್ಹನಿಯಾ, ಸತ್ಯಮೇವ ಜಯತೇ ಸೇರಿ ಹಲವು ಸಿನಿಮಾಗಳಲ್ಲೂ ಋತುರಾಜ್ ಪೋಷಕ ಪಾತ್ರ ನಿರ್ವಹಿಸಿದ್ದರು. ಇವರ ಸಾವಿಗೆ ಬಾಲಿವುಡ್‌ನ ಪ್ರಮುಖ ನಟ ನಟಿಯರು, ನಿರ್ಮಾಪಕರು, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ: ಸಿಎಂ

70 ವರ್ಷ ಕಾಂಗ್ರೆಸ್ ಏನು ಮಾಡಿದೆ? ಸಂತೋಷ್‌ ಲಾಡ್‌ಗೆ ಶೆಟ್ಟ‌ರ್ ಟಾಂಗ್‌

ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್

- Advertisement -

Latest Posts

Don't Miss