ಒಂದು ವರ್ಷದಿಂದ ಸಂಬಳ ಇಲ್ಲದ್ದಕ್ಕೆ ಪಾಲಿಕೆ ಆವರಣದಲ್ಲಿ ಕಸ ಹಾಕಿ ಚಾಲಕರ ಆಕ್ರೋಶ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳ ಯಡವಟ್ಟಿನಿಂದ, ಆಡಳಿತ ಪಕ್ಷದ ನಿರ್ಲಕ್ಷ್ಯದಿಂದ, ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಕೆಲಸ ಮಾಡುತ್ತಿರುವ ಟ್ರ್ಯಾಕ್ಟರ್ ಚಾಲಕರ ಜೀವನ ಅತಂತ್ರವಾಗಿದೆ. ಯಾವುದೇ ನೇಮಕಾತಿ ಭದ್ರತೆ ಇಲ್ಲ. ಮತ್ತೊಂದು ಕಡೆ ಒಂದು ವರ್ಷದಿಂದ ದುಡಿದ ಸಂಬಳವಿಲ್ಲದಂತಾಗಿದ್ದು, ಪಾಲಿಕೆ ಆವರಣದಲ್ಲಿ ಕಸ ಸಂಗ್ರಹಣೆ ವಾಹನಗಳನ್ನು ತಂದು ಹಾಕಿ, ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಸ್ವಚ್ಚ ಭಾರತ ಅಭಿಯಾನ ದದಡಿಯಲ್ಲಿ 8 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಅಂದಿನ ಇಲ್ಲಿಯವರೆಗೆ ಇವರಿಗೆ ಒಂದು ರೂಪಾಯಿ ಸಂಬಳ ಇವರಿಗೆ ಬಂದಿಲ್ಲ.. ನಮ್ಮ ಸಂಬಳ ನೀಡಿ ಅಂತ ಅಧಿಕಾರಿಗಳನ್ನು ಕೇಳಿದ್ರೆ ಇವತ್ತು, ನಾಳೆ ಅಂತ ಅಧಿಕಾರಿಗಳು ಇವರನ್ನು ಸತಾಯಿಸುತ್ತಿದ್ದಾರಂತೆ.. ಇದರಿಂದ ರೋಷಿಹೋದ ಈ ಚಾಲಕರು, ತಮ್ಮ ಕೆಲಸ ಬಿಟ್ಟು, ಕಸ ಸಂಗ್ರಹಣೆ ಮಾಡುವ ಟ್ರ್ಯಾಕ್ಟರ್ ಗಳನ್ನು ಪಾಲಿಕೆ ಆವರಣಕ್ಕೆ ತಂದು ಆಕ್ರೋಶ ಹೊರಹಾಕಿದ್ದಾರೆ‌..

ಪಾಲಿಕೆ ಇವರಿಗೆ ಸಂಬಳ ನೀಡಲು ಸತಾಯಿಸುತ್ತಿರುವ ಹಿಂದಿನ ಅಸಲಿಯತ್ತೆ ಬೇರೆಯಿದೆ.. ಅಸಲಿಗೆ ಕಳೆದ ಒಂದು ವರ್ಷದಿಂದ ಪಾಲಿಕೆಯಲ್ಲಿ ಇವರು ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ನಿಜ.. ಆದರೆ ಅದು ಕೇವಲ ಬಾಯಿ ಮಾತಿನಲ್ಲಿ.. ಇವರು ಪಾಲಿಕೆ ಚಾಲಕರು ಅನ್ನೋದಕ್ಕೆ ಯಾವ ದಾಖಲೆಗಳು ಸಹ ಇಲ್ಲ.. ಹೌದು 2023ರ ಅವಧಿಯಲ್ಲಿ ಪಾಲಿಕೆ ಕಸ ಸಂಗ್ರಹಣೆಗೆ ಸಹಾಯಕರು ಟ್ರ್ಯಾಕ್ಟರ್ ಚಾಲಕರು ಸೇರಿ ಒಟ್ಟು 70 ಜನರು ಬೇಕು ಅಂತ ಸರ್ಕಾರಕ್ಕೆ ಕೇಳಿತ್ತು.. ಇದರ ನಡುವೆ ಪಾಲಿಕೆ ಮನವಿ ಸರ್ಕಾರದಂಗಳ ಸೇರುವ ಮೊದಲೇ, ಹೇಗಿದ್ದರೂ ಅನುಮತಿ ನೀಡುತ್ತೆ ಅಂತ ಪಾಲಿಕೆ ಈ ಏಂಟು ಮಂದಿಯನ್ನು ಕೆಲಸಕ್ಕೆ ಸೇರಿಕೊಂಡಿದೆ.

ಸರ್ಕಾರದ ಆದೇಶ ಬಂದ ತಕ್ಷಣ ನೇಮಕಾತಿ ಪತ್ರ ನೀಡುತ್ತೆವೆ, ಈಗಲೇ ಕೆಸಲ ಆರಂಭಿಸಿ ಅಂತ ಚಾಲಕರಿಗೆ ತಿಳಿಸಿದೆ. ಅಧಿಕಾರಿಗಳ ಮಾತು ನಂಬಿ ಚಾಲಕರು ಕೆಲಸ ಆರಂಭಿಸಿದ್ದರು.. ಆದರೆ ಪಾಲಿಕೆ ಮನವಿಗೆ ಸರ್ಕಾರ ಕತ್ತರಿ ಹಾಕಿ 70 ಜನರ ಬದಲಿಗೆ 35 ಜನರನ್ನು ತೆಗೆದುಕೊಳ್ಳಲು‌ ಅನುಮತಿ ನೀಡಿದೆ. ಇದರ ಜೊತೆಗೆ ಮತ್ತೊಂದು ಕಡೆ ಧಾರವಾಡ ಜಿಲ್ಲಾಧಿಕಾರಿಗಳು ಆ 35 ಜನರ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ಸಹ ಕೇಳಿದ್ದು, ಸದ್ಯ ಈ ವಿಚಾರ ಹಗ್ಗ ಜಗ್ಗಾಟದಲ್ಲಿದೆ. ಆದರೆ ಇದರಿಂದ ಶಾಪಗ್ರಸ್ಥರಾಗಿರುವವರು ಮಾತ್ರ ಈ ಅಮಾಯಕ ಚಾಲಕರು..

ಒಂದು ಕಡೆ ಕೆಲಸಕ್ಕೆ ಸೇರಿ ಒಂದು ವರ್ಷವಾಗುತ್ತಿದ್ದರು ಇನ್ನೂ ಬಾರದ ಸಂಬಳ, ಮತ್ತೊಂದು ಕಡೆ ಇವರು ಪಾಲಿಕೆ ಚಾಲಕರು ಎನ್ನಲು ಇಲ್ಲ ಯಾವುದೇ ದಾಖಲೆ.. ಇದು ಈ ಚಾಲಕರನ್ನು ಚಿಂತೆಗೆ ದೂಡಿದೆ..ಇನ್ನೂ ಇವರನ್ನು ಕೆಲಸಕ್ಕೆ ಪಡೆದ ಅಧಿಕಾರಿಗಳಾಗಲಿ, ಮೇಯರ್ ಆಗಲಿ ಇವರ ಪರವಾಗಿ ನಿಲ್ಲುತ್ತಿಲ್ಲ..ಹೀಗಾಗಿ ಮುಂದೆನು ಎನ್ನುವ ಆತಂಕದಲ್ಲಿ ಈ ಚಾಲಕರು ಕಾಲ ಕಳೆಯುತ್ತಿದ್ದಾರೆ..

– ಸಂಗಮೇಶ ಸತ್ತಿಗೇರಿ, ಹುಬ್ಬಳ್ಳಿ, ಕರ್ನಾಟಕ ಟಿವಿ

ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ ಬಾಲಿವುಡ್ ಸೆಲೆಬ್ರಿಟಿಗಳು..

ಮನೆಯಲ್ಲೇ ಗಾಂಜಾ ಸೇವಿಸುವಾಗ ಸಿಕ್ಕಿಬಿದ್ದ ಬಿಗ್‌ಬಾಸ್ ಸ್ಪರ್ಧಿ

ತ್ರಿಷಾ ವಿರುದ್ಧ 25 ಲಕ್ಷ ಪಡೆದ ಆರೋಪ ಹಾಕಿದ್ದ ಮುಖಂಡನ ವಿರುದ್ಧ ಕಾನೂನು ಸಮರ..

About The Author