Bollywood News: ಬಾಲಿವುಡ್‌ನ ಆರ್ಟಿಕಲ್ 370 ಚಿತ್ರ ಇಂದು ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಗಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಉತ್ತಮ ರೆಸ್ಪಾನ್ಸ್ ಗಳಿಸಿರುವ ಆರ್ಟಿಕಲ್ 370 ಸಿನಿಮಾ ಬಗ್ಗೆ ಉತ್ತಮ ರಿವೀವ್ಸ್ ಕೂಡ ಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370ನ್ನು ಯಾಕೆ ತೆಗೆಯಲಾಯಿತು ಅನ್ನೋದು ಈ ಸಿನಿಮಾದ ಕಥೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡ, ತಮ್ಮ ಭಾಷಣದಲ್ಲಿ ಹೇಳಿದ್ದರು. ಸಿನಿಮಾದಲ್ಲಿ ಯಾಮಿ ಗೌತಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಷ್ಟೇ ಅಲ್ಲದೇ ಕನ್ನಡತಿ ಪ್ರಿಯಾಮಣಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಪಾತ್ರಗಳು ಕೂಡ ಕಂಡು ಬಂದಿದ್ದು, ಇವರು ಹೇಳುವ ಕಾಶ್ಮೀರ ಭಾರತದ ಭಾಗವಾಗಿತ್ತು. ಮತ್ತು ಭಾಗವಾಗಿಯೇ ಇರುತ್ತದೆ ಎನ್ನುವ ಡೈಲಾಗ್ ಎಲ್ಲರಿಗೆ ಇಷ್ಟವಾಗುವಂಥದ್ದು. ಕಾಶ್ಮೀರದಲ್ಲಿ ಭಯೋತ್ಪಾದಕರು ಯಾವ ರೀತಿ, ಅಧಿಕಾರ ಚಲಾಯಿಸುತ್ತಿದ್ದರು. ಇವರ ಸೊಕ್ಕನ್ನು ಮುರಿಯಲು ಪ್ರಧಾನಿ ಮೋದಿ ಸೇರಿ, ಹಲವರು ನಾಯಕರು, ಅಧಿಕಾರಿಗಳು ಹೇಗೆ ಪಣತೊಟ್ಟು ನಿಂತರು ಅನ್ನೋ ಬಗ್ಗೆ ವಿವರಿಸಲಾಗಿದೆ.
ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ ಬಾಲಿವುಡ್ ಸೆಲೆಬ್ರಿಟಿಗಳು..
ತ್ರಿಷಾ ವಿರುದ್ಧ 25 ಲಕ್ಷ ಪಡೆದ ಆರೋಪ ಹಾಕಿದ್ದ ಮುಖಂಡನ ವಿರುದ್ಧ ಕಾನೂನು ಸಮರ..




