Wednesday, April 16, 2025

Latest Posts

ಬಿಜೆಪಿ ಸೋಲಿಗೆ ಕಾರಣವೇನು ಮತ್ತು ಕಾರಣರು ಯಾರು ಅನ್ನೋ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?

- Advertisement -

Political News: ಕರ್ನಾಟಕ ಟಿವಿಯ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಮತ್ತು ಕಾರಣರು ಯಾರು ಅನ್ನೋ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದಲ್ಲಿ ವಿರೋಧ ಪಕ್ಷದ ಅಲೆ, ನಮ್ಮ ಸಮಯೋಚಿತವಲ್ಲದ ನಿರ್ಧಾರ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣವಾಯ್ತು. ಇದನ್ನು ನಾವು ತಪ್ಪು ನಿರ್ಧಾರ ಅಂತ ಹೇಳುವುದಿಲ್ಲ. ಸಮಯೋಚಿತವಲ್ಲದ ನಿರ್ಧಾರ ಎನ್ನುತ್ತೇನೆ. ಆದರೆ ಕೇಂದ್ರದಲ್ಲಿ ಹಾಗಿಲ್ಲ. ಕೇಂದ್ರದಲ್ಲಿ ಉತ್ತಮ ಆಡಳಿತವಿದೆ. ಕೇಂದ್ರದಲ್ಲಿ ನೀತಿ, ನೇತಾ, ನಿಯತ್ತು ಮೂರು ಸರಿ ಇದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನೀತಿ ಅಂದ್ರೆ ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನೋದು ನಮ್ಮ ನೀತಿ. ಅದು ಬಡವರ ಪರವಾಗಿರುವ ನೀತಿ. ವ್ಯಕ್ತಿಗತ ರಾಜಕಾರಣವಲ್ಲ. ಫ್ಯಾಮಿಲಿ ಇಂಟರೆಸ್ಟ್ ಮತ್ತು ನ್ಯಾಷನಲ್ ಇಂಟ್ರೆಸ್ಟ್ ನಡುವೆ ನ್ಯಾಷನಲ್ ಇಂಟ್ರೆಸ್ಟ್ ಪ್ರತಿಪಾದಿಸುವುದು ನಮ್ಮ ನೀತಿ. ನೇತಾ ಅಂದ್ರೆ ಮೋದಿ. ಜನಸಮೂಹದಿಂದ ಬೆಳೆದು ಬಂದ ನಾಯಕತ್ವ. ಯಾರೋ ಬಂದು ನೀಡಿದ ನಾಯಕತ್ವವಲ್ಲ. ಧಿಡೀರ್ ಅಂತ ಉದ್ಭವಿಸಿದ ಲೀಡರ್‌ಶಿಪ್ ಅಲ್ಲ. ಡಿಎನ್‌ಎ ಮೂಲಕ ಬಂದಿರುವ ಲೀಡರ್ ಶಿಪ್‌ ಅಲ್ಲ. ಕುಟುಂಬ ರಾಜಕಾರಣವಿಲ್ಲ ಎಂದು ರವಿ ಹೇಳಿದ್ದಾರೆ.

ಯಶಸ್ವಿ ನಾಯಕತ್ವವನ್ನೇ ಬ್ರ್ಯಾಂಡ್‌ ಆಗಿಸಿದ ನಾಯಕತ್ವ. ಆ ಬ್ರ್ಯಾಂಡನ್ನೇ ಜನರ ಮುಂದೆ ಇಟ್ಟಿರುವ ನೇತಾ ಅಂದ್ರೆ ಪ್ರಧಾನಿ ಮೋದಿ. ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಚುನಾವಣೆಯನ್ನು ಗೆದ್ದಿದೆ. ಈಗ 6ನೇಯ ಬಾರಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ

ಯಾವ ನೈತಿಕತೆಯಿಂದ ಇನ್ನೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದೀರಿ?: ಪ್ರೀತಂಗೌಡ

- Advertisement -

Latest Posts

Don't Miss