Friday, July 11, 2025

Latest Posts

ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯುವುದಿಲ್ಲ: ಸಿಎಂ ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ

- Advertisement -

Hubli News: ನಿಮಗೆ ಮಾನ ಮರ್ಯಾದೆ ಇಲ್ಲ‌‌ ಅಂದ್ರೆ ನನಗೆ ಇಲ್ಲ ಅಂದುಕೊಂಡಿದ್ದಿರಾ?ಸಿದ್ದರಾಮಯ್ಯ ಅವರೇ ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯುವುದಿಲ್ಲ ಅಂತ, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.

ಮಹದಾಯಿ ವಿಚಾರವಾಗಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿ ಅವರು ಮಾತನಾಡಿದರು.. ಸಿದ್ದರಾಮಯ್ಯ ಅವರಿಗೆ ಮಹಾದಾಯಿಗೆ ಈಸಿ ಸಿಕ್ಕಿದೆ ಅಂತಾನೂ ಗೊತ್ತಿಲ್ಲ. ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಿ ನೀವು ಏಕವಚನದಲ್ಲಿ ಮಾತನಾಡಿದ್ದಿರಿ ನಿಮ್ಮ ಸಂಸ್ಕೃತಿಗೆ ನಾನು ಇಳಿಯುವದಿಲ್ಲ. ನೀವು ಹೇಗೆ ಪ್ರಮಾಣವಚನ ಸ್ವೀಕರಿಸಿದದ್ದಿರಿ ಹಾಗೆ ನಾನು ಕೂಡ ಪ್ರಮಾಣವಚನ ಸ್ವೀಕಾರ ಮಾಡಿರುವೆ. ಆಡಳಿತ ಅಧಿಕಾರ ನಿಮಗೆ ಜಾಸ್ತಿ ಇರಬಹುದು ಕೇಂದ್ರ ಸರ್ಕಾರದ ಒಬ್ಬ ಮಂತ್ರಿ ರಾಜ್ಯದ ಮುಖ್ಯ ಮಂತ್ರಿ ಸಂವಿಧಾನದಲ್ಲಿ ಒಂದೇ. ನಾನು ಮಾನ ಮರ್ಯಾದೆ ಬಿಟ್ಟು ವರ್ತನೆ ಮಾಡುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಸಿದ್ದರಾಮಯ್ಯ ಏನು ಫೈಲ್ ನೋಡದೆ ಉಡಾಫೆ ಹೊಡಿತ್ತಾರೆ. ಕಾಂಗ್ರೆಸ್ ಎಲ್ಲಾ ಸಂದರ್ಭದಲ್ಲಿ ಕಳಸಾ ಬಂಡೂರಿಗೆ ಅನ್ಯಾಯ ಮಾಡಿದೆ. ಡಿಪಿಆರ್ ಸಹ ಬಿಜೆಪಿ ಮಾಡಿದೆ,ಆದರೆ ಸೋನಿಯ ಗಾಂಧಿ ಗೋವಾ ಗೆ ಹೋಗಿ ಹನಿ‌ ನೀರು ಕೊಡಲ್ಲ ಅಂದ್ರು. ಫಾರೆಸ್ಟ್ ಕ್ಲಿಯರ್ ಬೇಕಾಗಿದೆ. ತಾಂತ್ರಿಕ ಸಮಸ್ಯೆಯಿದೆ. ಹುಲಿ‌ ರಕ್ಷಣೆ ಪ್ರಾಧಿಕಾರ ಅನುಮತಿ ಬೇಕಾಗಿದೆ. ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಇವರಿಗೆ ಎಷ್ಟು ನಾಲಿಗೆ ಇದೆ ಅಂತ ಗೊತ್ತಾಗಿದೆ. ಹೀಗಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಏನು ಪರಿಸ್ಥಿತಿ ಮಾಡಿದ್ದಿರೆ.‌ ಮುಂದೆ ಇಗಿರುವ 52 ಸಹ ಕಡಿಮೆ ಆಗಲಿದೆ ಸಿದ್ದರಾಮಯ್ಯ ನಿಮಗೆ ಮುಖ್ಯ ಮಂತ್ರಿ ಮಾಡಿದ್ದಾರೆ.

ಜೆಡಿಎಸ್ ಬಿಟ್ಟು ಬಂದಿದ್ದಾರೆ ಅಂದುಕೊಂಡು, ಈ ರೀತಿ ವಿವೇಚನ ರಹಿತವಾಗಿ‌ ಮಾತನಾಡುತ್ತಿದ್ದಿರಿ. ಹೋಗಿ ತೃಣಮೂಲ ಕಾಂಗ್ರೆಸ್ ಬಳಿ‌ ಬಿಕ್ಷೆ ಬೇಡುತ್ತಿದ್ದಿರಿ.. ಎರಡು ಸಿಟ್ ಕೊಡಿ ಮೂರು ಸಿಟ್ ಕೊಡಿ ಅಂತ ನಿವೇನು ಮಾತಡತ್ತಿದ್ದಿರಿ ಸಿದ್ದರಾಮಯ್ಯ ಎಂದಿದ್ದಾರೆ.ಸಿಟಿ ರವಿ ಮತ್ತು ಶೋಭಾ ಕರಂದ್ಲಾಜೆ ಗೋ ಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು,ಕಾಂಗ್ರೆಸ್ ಸ್ವಂತ ಬಲ ಮತ್ತು ಅಭಿವೃದ್ಧಿದಿಂದ ಗೆಲ್ಲುವುದಿಲ್ಲ,ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಾರೆ ಕಾಂಗ್ರೆಸ್ ಪಾರ್ಟಿ ಷಡ್ಯಂತರಕ್ಕೆ ಜನ ಬಲಿಯಾಗುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಅವನತಿಗೆ ಕಾರಣವೇನು..? ಈ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?

ನರೇಂದ್ರ ಮೋದಿ ಬಳಿಕ ದೇಶದ ಮುಂದಿನ ಪ್ರಧಾನಿ ಯಾರಾಗ್ತಾರೆ..?

ಸಂವಿಧಾನ ಬದಲಾಯಿಸಲು ಬಂದವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss