Jharkhand Political News: ಜಾರ್ಖಂಡದ ಏಕೈಕ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈಕೆ ಮಾಜಿ ಸಿಎಂ ಮಧು ಕೋಡಾ ಅವರ ಪತ್ನಿಯಾಗಿದ್ದು, ಪತ್ನಿಯೊಂದಿಗೆ ಪತಿ ಮಧು ಕೂಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇನ್ನು ಕಾಂಗ್ರೆಸ್ ಬಿಟ್ಟು ಗೀತಾ ಬಿಜೆಪಿ ಸೇರಲು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ, ಜೆಎಂಎಂ ಮೈತ್ರಿಯೇ ಕಾರಣವಾಗಿದೆ. ಈ ಮೈತ್ರಿ ಸಂಸದೆ ಗೀತಾಗೆ ಇಷ್ಟವಿರಲಿಲ್ಲ. ಹಾಗಾಗಿ ಗೀತಾ ಮತ್ತು ಅವರ ಪತಿ ಜಾರ್ಖಂಡ್ ಮಾಜಿ ಸಿಎಂ ಮಧು ಕೋಡಾ ಅವರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಜಾರ್ಖಂಡ್‌ನಲ್ಲಿ ಇತ್ತೀಚೆಗೆ ಚಂಪೈ ಸೊರೇನ್ ಸಿಎಂ ಆದ ಬಳಿಕ, ಸಚಿವ ಸಂಪುಟದಲ್ಲಿ ಹಲವು ಬದಲಾವಣೆಗಳನ್ನು ತಂದರು. ಕೆಲವರು ಸಚಿವರನ್ನಾಗಿ ಮಾಡಿದರು. ಈ ವೇಳೆ ಹಲವು ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ಯೋಚನೆ ಮಾಡಿದ್ದಾರೆ. ಇದೀಗ ಸಂಸದೆ ಗೀತಾ ಬಿಜೆಪಿ ಸೇರಿದ್ದು, ಕಾಂಗ್ರೆಸ್‌ಗೆ ಮತ್ತೊಂದು ಸವಾಲ್ ಎದುರಾಗಿದೆ.
ಕಾಂಗ್ರೆಸ್ ಅವನತಿಗೆ ಕಾರಣವೇನು..? ಈ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?

