Hubli News: ಹುಬ್ಬಳ್ಳಿ: ದೇಶವನ್ನು ಪೋಲಿಯೋ ಮುಕ್ತಗೊಳಿಸುವ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಹುಬ್ಬಳ್ಳಿಯಲ್ಲಿ, ಶಾಸಕ ಮಹೇಶ ಟೆಂಗಿನಕಾಯಿ ಐದು ವರ್ಷದ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನಡೆದ ಪೋಲಿಯೋ ಲಸಿಕೆ ಹಾಕುವ ಅಭಿಯಾನದಲ್ಲಿ, ಶಾಸಕರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಮುಖ್ಯ ಆರೋಗ್ಯ ಅಧಿಕಾರಿ ಶ್ರೀಧರ ದಂಡೆಪ್ಪನವರ ಸಾಥ್ ಕೊಟ್ಟರು.
ಇಂದಿನಿಂದ ಐದು ದಿನಗಳ ನಡೆಯುವ ಈ ಅಭಿಯಾನ ಹುಬ್ಬಳ್ಳಿ-ಧಾರವಾಡದ 1.25 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ಈ ಮೂಲಕ 100 ರಷ್ಟು ಗುರಿ ಸಾಧಿಸಿಸುವ ಉದ್ದೇಶ ಹೊಂದಲಾಗಿದೆ. 2d 3d 3d 1,700 ನೇಮಕ ಮಾಡಲಾಗಿದೆ. 361 ಫಿಕ್ಸ್ ಬೂತ್, 49 ಮೊಬೈಲ್ ಬೂತ್, 69 ಟ್ರಾನ್ಸಿಟ್ ಬೂತ್, 8000 ವ್ಯಾಕ್ಸಿನ್ ವೈಲ್ ಸಿದ್ಧತೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ ಮಾಹಿತಿ ನೀಡಿದರು.