News: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಬಳಕೆದಾರರು ಇವತ್ತು ಸಿಕ್ಕಾಪಟ್ಟೆ ಗಲಿಬಿಲಿ ಆಗಿದ್ದಾರೆ. ದಿಢೀರ್ ಅಂತ ಅವರ ಅಕೌಂಟ್ ಲಾಗ್ ಔಟ್ ಆಗಿದ್ದು, ಮತ್ತೆ ಲಾಗ್ ಇನ್ ಮಾಡಲು ಪರದಾಡಿದ್ದಾರೆ. ಡೆಸ್ಕ್‌ಟಾಪ್ ಹಾಗೂ ಮೊಬೈಲ್‌ನಲ್ಲಿ ಬಳಸುವ ಫೇಸ್‌ಬುಕ್ ಅಕೌಂಟ್‌ಗಳು ಲಾಗ್ ಔಟ್ ಆಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಫೇಸ್‌ಬುಕ್ ಜೊತೆಗೆ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಕೂಡ ದಿಢೀರ್ ಬಂದ್ ಆಗಿದೆ. ಮೆಟಾ ಕಂಪನಿಯ ಸೋಷಿಯಲ್ ಮೀಡಿಯಾಗಳಲ್ಲಿ ಈ ತಾಂತ್ರಿಕ ದೋಷ ಕಂಡು ಬಂದಿದೆ. ಕೆಲ ಹೊತ್ತು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ಲಾಗ್ ಇನ್ ಮಾಡಲು ಪರದಾಡಿದ್ದಾರೆ.
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಲಾಗ್ ಔಟ್ ಆಗಿರೋದು ಯಾರೋ ಒಬ್ಬರದಲ್ಲ. ವಿಶ್ವದಾದ್ಯಂತ ಎಲ್ಲರ ಅಕೌಂಟ್‌ಗಳು ಇಂದು ದಿಢೀರನೇ ಸಮಸ್ಯೆಗೆ ಸಿಲುಕಿದೆ. ಇದಕ್ಕೆ ಜಾಗತಿಕವಾಗಿ ಫೇಸ್‌ಬುಕ್ ಸರ್ವರ್ ಡೌನ್ ಆಗಿರೋದೇ ಕಾರಣ ಎನ್ನಲಾಗಿದೆ.
ಮೆಟಾ ಕಂಪನಿಯ ಸೋಷಿಯಲ್ ಮೀಡಿಯಾ ನೆಟ್‌ವರ್ಕ್ ದಿಢೀರನೇ ಬಂದ್ ಆಗಿದೆ. ಇದರಿಂದ ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಬಳಸುವ ಲಕ್ಷಾಂತರ ಜನರು ತಮ್ಮ ಅಕೌಂಟ್‌ಗಳನ್ನು ಎಂದಿನಂತೆ ಬಳಸಲು ಸಾಧ್ಯವಾಗಿಲ್ಲ.
ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ