Hubli News: ಹುಬ್ಬಳ್ಳಿ: ರೈತರೊಬ್ಬರು ಹೊಲದಲ್ಲಿ ಸಂಗ್ರಹಿಸಿಟ್ಟಿದ್ದ ಕಡಲೆ ಬೆಳೆಯ ಬಣವೆಗೆ ಕಿಡಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸುಮಾರು ನೂರು ಕ್ವಿಂಟಲ್ ಕಡಲೆ ಬೆಂಕಿಗೆ ಆಹುತಿಯಾದ ಘಟನೆ ತಡರಾತ್ರಿ ಅಣ್ಣಿಗೇರಿ ತಾಲ್ಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿಶ್ವಿನಹಳ್ಳಿ ಗ್ರಾಮದ ಪಾಂಡಪ್ಪಗೌಡ ಸೋಮನಗೌಡ್ರ ಎಂಬುವರು ತಮ್ಮ ಹೊಲದಲ್ಲಿ ರಾಶಿ ಮಾಡುವ ಸಲುವಾಗಿ ಕಡಲೆ ಬೆಳೆಯನ್ನು ಸಂಗ್ರಹಿಸಿ ಇಟ್ಟಿದ್ದರು. ಆದರೆ ತಡರಾತ್ರಿ ಯಾರು ಕಿಡಗೇಡಿಗಳು ಕಡಲೆ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮೊದಲೇ ಬರಗಾಲದಲ್ಲಿ ಬಂದಿದ್ದ ತುತ್ತು ಇದೀಗ ರೈತ ಪಾಂಡಪ್ಪನ ಬಾಯಿಗೆ ಬರದಂತಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಅಣ್ಣಿಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಬಣವೆಗೆ ಬೆಂಕಿ ಹಚ್ಚಿ ಹೋದವರ ಪತ್ತೆಗೆ ಮುಂದಾಗಿದ್ದಾರೆ. ಸದ್ಯ ರೈತ ಪಾಂಡಪ್ಪ ಸಂಕಷ್ಟದಲ್ಲಿದ್ದು ಜಿಲ್ಲಾಡಳಿತ ಈತನಿಗೆ ಏನಾದ್ರು ನೇರವನ್ನು ಕೊಡುತ್ತಾ ಅಥವಾ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.