Movie News: ನಟ ರಕ್ಷಿತ್ ಶೆಟ್ಟಿ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಸಮಯ ಮಾಡಿಕೊಂಡು ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕರಾವಳಿಯಲ್ಲಿ ನಡೆದ ನೇಮೋತ್ಸವ, ತಮ್ಮ ಮನನೆಯಲ್ಲಿ ನಡೆದ ಭೂತ ಕೋಲದ್ದಲೂ ರಕ್ಷಿತ್ ಭಾಗಿಯಾಗಿದ್ದರು. ಅಲ್ಲದೇ, ಮಾರಿಯಮ್ಮ ದೇವಸ್ಥಾನಕ್ಕೂ ರಕ್ಷಿತ್ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ರಕ್ಷಿತ್ ಸ್ನೇಹಿತರೊಂದಿಗೆ, ಅಯೋಧ್ಯೆಗೆ ಹೋಗಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ರಕ್ಷಿತ್, ರಾಮಲಲ್ಲಾನನ್ನು ಕೆತ್ತಿದ ಶಿಲ್ಪಿಯ ಬಗ್ಗೆ ಶಿಲ್ಪಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಾಮಲಲ್ಲಾನ ಕಣ್ಣುಗಳನ್ನು ಕೆತ್ತಿದ್ದರ ಬಗ್ಗೆ ರಕ್ಷಿತ್ ಬರೆದುಕೊಂಡಿದ್ದಾರೆ. ಅದರಲ್ಲಿರುವ ತೇಜಸ್ಸನ್ನು ವಿವರಿಸಿದ್ದಾರೆ. ಅಲ್ಲದೇ, ಬರೀ ಅಯೋಧ್ಯೆ ಅಷ್ಟೇ ಅಲ್ಲದೇ, ರಕ್ಷಿತ್, ಪ್ರಯಾಗ್ ರಾಜ್, ಕಾಶಿ ಸೇರಿ ಹಲವು ಪುಣ್ಯಕ್ಷೇತ್ರಗಳ ದರ್ಶನ ಮಾಡಿದ್ದಾರೆ. ಈ ಬಗ್ಗೆಯೂ ಬರೆದುಕೊಂಡಿದ್ದಾರೆ.
ತಮ್ಮೊಂದಿಗೆ ಬಂದ ಸ್ನೇಹಿತರು ಪ್ರವಾಸವನ್ನು ಸುಂದರಗೊಳಿಸಿದರು. ವಿಶ್ವೇಶ್ವರ ತೀರ್ಥರ ಆಶೀರ್ವಾದವೂ ಸಿಕ್ಕಿತು, ಇದೊಂದು ಅತ್ಯದ್ಭುತ ಅನುಭವ, ಜೈ ಆಂಜನೇಯ, ಜೈ ಶ್ರೀರಾಮ್ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ ಕಾದುನೋಡಿ: ಡಿಸಿಎಂ ಡಿಕೆಶಿ
ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ
ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು: ಸಚಿವ ರಾಮಲಿಂಗಾರೆಡ್ಡಿ