Political News: ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿರುವ ರಾಹುಲ್ ಗಾಂಧಿ, ಚುನಾವಣಾ ಪ್ರಚಾರ ಮಾಡುವ ಭರದಲ್ಲಿ, ಪ್ರಧಾನಿ ಮೋದಿಗೆ, ಬಿಜೆಪಿಗೆ, ಬಿಜೆಪಿ ಬೆಂಬಲಿಗರಿಗೆ ಬಾಯಿಗೆ ಬಂದಂತೆ ಸಂಬೋಧಿಸುತ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ, ಮಾತನಾಡುವಾಗ ಎಚ್ಚರಿಕೆಯಿಂದ ಇರಿ ಎಂದು ಹೇಳಿದೆ.
ಭಾಷಣದ ವೇಳೆ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಪನೌತಿ, ಜೆಬುಗಳ್ಳ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಹಲವರು ವಿರೋಧಿಸಿದ್ದರು. ಅಲ್ಲದೇ, ಚುನಾವಣಾ ಆಯೋಗ ಕೂಡ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಿದೆ. ರಾಹುಲ್ ಗಾಂಧಿ ಭಾಷಣದ ವೇಳೆ ಈ ರೀತಿ ಮಾತನಾಡಿ, ಎಡವಟ್ಟು ಮಾಡಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಮೋದಿ ಎಂಬ ಅಡ್ಡಹೆಸರು ಇರುವವರ ಬಗ್ಗೆ ಮಾತತನಾಡಿ, ರಾಹುಲ್ ಗಾಂಧಿ ಶಿಕ್ಷೆಗೆ ಒಳಪಟ್ಟಿದ್ದರು.
ಅಲ್ಲದೇ, ಮೊನ್ನೆ ಮೊನ್ನೆಯಷ್ಟೇ ರಾಮಮಂದಿರ ಉದ್ಘಾಟನೆ ವೇಳೆ, ಸಾಮಾನ್ಯ ಜನರು ಇರಲಿಲ್ಲ. ಪ್ರಧಾನಿ ಮೋದಿ, ಅಮಿತಾಬಚ್ಚನ್, ಐಶ್ವರ್ಯಾ ರೈ ಇದ್ದರು ಎಂದು ಹೇಳಿದ್ದರು. ಈ ವೇಳೆ ಐಶ್ವರ್ಯಾ ರೈ ಅನ್ನು ನಾಚ್ನೇವಾಲಿ ಎಂದು ಸಂಬೋಧಿಸಿದ್ದರು. ಈ ಕಾರಣಕ್ಕೆ ಹಲವರು ಬಾಲಿವುಡ್ ನಟ, ನಟಿಯರು, ಗಾಯಕಿಯರು ಸೇರಿ, ಹಲವರು ಆಕ್ರೋಶ ಹೊರಹಾಕಿದ್ದರು. ಅಲ್ಲದೇ, ಅಮಿತಾಬ್ ಕೂಡ ಟ್ವೀಟ್ ಮಾಡುವ ಮೂಲಕ, ಹೆಸರು ಹೇಳದೇ, ಲೈಟ್ ಆಗಿ ಚಾಟೀ ಬೀಸಿದ್ದರು.
ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ ಕಾದುನೋಡಿ: ಡಿಸಿಎಂ ಡಿಕೆಶಿ
ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ
ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು: ಸಚಿವ ರಾಮಲಿಂಗಾರೆಡ್ಡಿ

