Monday, October 6, 2025

Latest Posts

ನೋಂದಣಿ ಕೇಂದ್ರದಲ್ಲಿ ರೈತರನ್ನು ನಿಯಂತ್ರಿಸಿ, ನೀರು, ಊಟದ ವ್ಯವಸ್ಥೆ ಮಾಡಿದ ಶಾಸಕ ಶಿವಲಿಂಗೇಗೌಡ

- Advertisement -

Hassan News: ಹಾಸನ : ಮಹಾಶಿವರಾತ್ರಿ ಹಬ್ಬದ ದಿನವೂ, ಹಾಸನದಲ್ಲಿ ರೈತರು ಕೊಬ್ಬರಿ ಖರೀದಿ ನೋಂದಣಿಗೆ ಮುಗಿಬಿದ್ದಿದ್ದಾರೆ. ಬೆಳಿಗ್ಗೆಯಿಂದಲೂ ಅರಸೀಕೆರೆ ನೋಂದಣಿ ಕೇಂದ್ರಗಳ ಮುಂದೆ, ರೈತರು ಮತ್ತು ಮಹಿಳೆಯರು ಗಂಟೆಗಟ್ಟಲೆ ಕ್ಯೂ ನಿಂತಿದ್ದಾರೆ.

ಈ ವಿಷಯ ತಿಳಿದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ, ಸ್ಥಳಕ್ಕೆ ಧಾವಿಸಿ, ಲಾಠಿ ಹಿಡಿದು ರೈತರನ್ನು ನಿಯಂತ್ರಿಸಿದ್ದಾರೆ. ಅಲ್ಲದೇ ಶಿವಲಿಂಗೇಗೌಡ ಕೂಡ ಬೆಳಿಗ್ಗೆಯಿಂದ ಎಪಿಎಂಸಿಯಲ್ಲಿರುವ ನೋಂದಣಿ ಕೇಂದ್ರದ ಬಳಿಯೇ ಕುಳಿತಿದ್ದರು. ಸರತಿ ಸಾಲಿನಲ್ಲಿ ನಿಂತಿರುವ ರೈತರಿಗೆ ಕುಡಿಯುವ ನೀರು, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ.

ಇನ್ನು ಇದು ಮೊದಲನೇಯ ದಿನವಲ್ಲ. ನಾಲ್ಕು ದಿನಗಳಿಂದಲೂ ಶಿವಲಿಂಗೇಗೌಡರು, ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಬೆಳಿಗ್ಗೆಯಿಂದ ನೋಂದಣಿ ಕೇಂದ್ರದಲ್ಲಿದ್ದು, ರೈತರನ್ನು ನಿಯಂತ್ರಿಸಿ, ನೋಂದಣಿ ಮಾಡಿಸುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ 2,25,000 ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅನುಮತಿ ನೀಡಿದ್ದು, ಕೊಬ್ಬರಿ ಖರೀದಿ ನೋಂದಣಿ ಇಂದು ಮುಕ್ತಾಯವಾಗಲಿದೆ.

FIRನಲ್ಲಿ ನಾಸೀರ್ ಹುಸೇನ್ ಹೆಸರು ಸೇರಿಸಬೇಕು: ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ

ಹಾಸನದ ಖಾಸಗಿ ಕಾಲೇಜಿನಲ್ಲಿ ಹಿಜಬ್ ವರ್ಸಸ್ ಕೇಸರಿ ಶಾಲು ಫೈಟ್

ಹುಬ್ಬಳ್ಳಿಯ ಬಸವೇಶ್ವರ ಖಾನಾವಳಿಯಲ್ಲಿ ಹೋಳಿಗೆ ಊಟ ಸವಿದ ನಿರ್ದೇಶಕ ಯೋಗರಾಜ್ ಭಟ್

- Advertisement -

Latest Posts

Don't Miss