International News: ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆ ಕೊಲೆಯಾಗಿದ್ದು, ಶವ ಪತ್ತೆಯಾಗಿದೆ. ಈಕೆಯ ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶ್ವೇತಾ ಎಂಬ ಹೈದರಾಬಾದ್ ನಿವಾಸಿ ಆಸ್ಟ್ರೇಲಿಯಾದಲ್ಲಿ ತಮ್ಮ ಪತಿ ಮತ್ತು ಮಗುವಿನೊಂದಿಗೆ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಶ್ವೇತಾಳ ಮೃತದೇಹ ಬೀದಿ ಬದಿಯಲ್ಲಿ ಇರಿಸಿದ ಡಬ್ಬದಲ್ಲಿ ಪತ್ತೆಯಾಗಿತ್ತು. ಈ ವಿಷಯ ತಿಳಿಯುವ ಹೊತ್ತಿಗೆ ಆಕೆಯ ಪತಿ ಮತ್ತು ಮಗು ಹೈದರಾಬಾದ್‌ಗೆ ಬಂದಾಗಿತ್ತು. ಹಾಗಾಗಿ ಈ ಕೃತ್ಯವನ್‌ನು ಪತಿಯೇ ಮಾಡಿರಬೇಕು ಅನ್ನೋ ಶಂಕೆ ವ್ಯಕ್ತವಾಗಿದೆ .
ಆಸ್ಟ್ರೇಲಿಯಾದಲ್ಲಿ ಪತ್ನಿಯ ಕೊಲೆ ಮಾಡಿರುವ ಪತಿ, ಮಗುವನ್ನು ಕರೆದುಕೊಂಡು ಹೈದರಾಬಾದ್‌ಗೆ ಬಂದಿಳಿದಿದ್ದಾನೆಂದು ಅಂದಾಜಿಸಲಾಗಿದೆ.ಈ ಬಗ್ಗೆ ಮೃತ ಮಹಿಳೆಯ ಪೋಷಕರು ಕೂಡ ಮಾತನಾಡಿದ್ದು, ತಮ್ಮ ಮಗಳನ್ನು ಅಳಿಯನೇ ಕೊಂದಿರಬಹುದು ಎಂದಿದ್ದಾರೆ. ಅಲ್ಲದೇ, ಮೃತದೇಹವನ್ನು ಭಾರತಕ್ಕೆ ಕರೆತರಲು, ಮಹಿಳೆಯ ಪೋಷಕರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನು ವಿಕ್ಟೋರಿಯಾ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ
ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ

