Political News: ನಿನ್ನೆ ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಜಿ.ಎಸ್.ಮಂಜುನಾಥ್, ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು.
ಚುನಾವಣೆ ಸಮಯ ಹತ್ತಿರ ಬರುತ್ತಿರುವ ಕಾರಣಕ್ಕೆ, ಸಿಲಿಂಡರ್ ಬೆಲೆ ನೂರು ರೂಪಾಯಿ ಇಳಿಸಿದ್ದಾರೆ. ಅವರೇನಾದರೂ ನನಗೆ ಸಿಕ್ಕರೆ, ಕಾಲಲ್ಲಿದ್ದದ್ದನ್ನು ಕೈಗೆ ತೆಗೆದುಕೊಂಡು ಹೊಡೆಯುತ್ತೇನೆ ಎಂದು ಹೇಳಿದ್ದರು. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷಕ್ಕೂ ಅದರ ನಾಯಕರಿಗೂ ಸಂಸ್ಕೃತಿಯೇ ಇಲ್ಲ ಎಂದು ಪದೇ ಪದೇ ನಿರೂಪಿಸುತ್ತಿದ್ದಾರೆ. ದೇಶದ ಜನ ಸರ್ವಾನುಮತದಿಂದ ಆಯ್ಕೆ ಮಾಡಿ ಪ್ರಧಾನಿ ಸ್ಥಾನದಲ್ಲಿ ಕುಳಿತಿರುವ ಮೋದಿಯವರಿಗೆ ಗೌರವದಿಂದ ಸಂಭೋದಿಸಬೇಕು ಎಂದು ತಿಳಿದೇ ಇಲ್ಲ ಅನಿಸುತ್ತದೆ. ಇಡೀ ಪ್ರಪಂಚವೇ ಮೋದಿಯವರ ಆಡಳಿತ ಕಾರ್ಯವೈಖರಿಗೆ ಮನಸೋತು ವಿಶ್ವನಾಯಕನಾಗಿ ಸ್ವೀಕರಿಸಿರುವ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಅಯೋಗ್ಯ ವಕ್ತಾರ ಕಾರ್ಮಿಕ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ. ಎಸ್. ಮಂಜುನಾಥ ಪ್ರಧಾನಿಯ ಬಗ್ಗೆ ಮಾತನಾಡುವಾಗ ಬಳಸಿರುವ ಪದಗಳು ಹೇಗಿದೆ ನೋಡಿ. ಕಾಂಗ್ರೆಸ್ ಪಕ್ಷದ ಈ ಅಯೋಗ್ಯ ವರ್ತನೆಗೆ ಇಡೀ ದೇಶವೇ ತಲೆ ತಗ್ಗಿಸುವ ಸ್ಥಿತಿ ಬಂದಿದೆ. ನಾಚಿಕೆ ಆಗಬೇಕು ನಿಮ್ಮ ನೀತಿಗೆಟ್ಟ ವರ್ತನೆಗಳಿಗೆ ಎಂದು ಜೋಶಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೂ ಅದರ ನಾಯಕರಿಗೂ ಸಂಸ್ಕೃತಿಯೇ ಇಲ್ಲ ಎಂದು ಪದೇ ಪದೇ ನಿರೂಪಿಸುತ್ತಿದ್ದಾರೆ. ದೇಶದ ಜನ ಸರ್ವಾನುಮತದಿಂದ ಆಯ್ಕೆ ಮಾಡಿ ಪ್ರಧಾನಿ ಸ್ಥಾನದಲ್ಲಿ ಕುಳಿತಿರುವ ಮೋದಿಯವರಿಗೆ ಗೌರವದಿಂದ ಸಂಭೋದಿಸಬೇಕು ಎಂದು ತಿಳಿದೇ ಇಲ್ಲ ಅನಿಸುತ್ತದೆ. ಇಡೀ ಪ್ರಪಂಚವೇ ಮೋದಿಯವರ ಆಡಳಿತ ಕಾರ್ಯವೈಖರಿಗೆ ಮನಸೋತು ವಿಶ್ವನಾಯಕನಾಗಿ ಸ್ವೀಕರಿಸಿರುವ… pic.twitter.com/vYevbxCKig
— Pralhad Joshi (Modi Ka Parivar) (@JoshiPralhad) March 11, 2024
ಮಾವನ ಮೇಲೆ ಸ್ಟಿಕ್‌ನಿಂದ ಹಲ್ಲೆ ಮಾಡಿದ ಸೊಸೆ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ, ಈ ದೇಶದಲ್ಲಿ ರಕ್ತಪಾತವಾಗುತ್ತದೆ: ಸಿಎಂ ಸಿದ್ದರಾಮಯ್ಯ