Political News: ಈ ಬಾರಿ ಲೋಕಸಭೆ ಚುನಾವಣೆಗೆ ಮೈಸೂರು ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹಗೆ ಟಿಕೇಟ್ ಸಿಗುವುದಿಲ್ಲವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್ ಸಿಂಹ, ನಾನು ಸಾಯುವವರೆಗೂ ಮೋದಿ ಭಕ್ತ. ನಾನು ಯಾವುದೇ ಕಾರಣಕ್ಕೂ ಪಕ್ಷೇತರವಾಗಿ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಜನಸಂಘದ ದೀಪದ ಗುರುತಿನಲ್ಲಿ ಗೆದ್ದು ಪಂಚಾಯಿತಿ ಛೇರ್ಮನ್ ಆದ ವ್ಯಕ್ತಿಯ ಮಗ, ನಾನು ಸಾಯುವವರೆಗೂ ಮೋದಿ ಭಕ್ತ ಎಂದು ಪ್ರತಾಪ್ ಹೇಳಿದ್ದಾರೆ. ಅಲ್ಲದೇ, ನನ್ನನ್ನು ಏನೇ ಮಾಡ್ತೀರಿ ಅಂದ್ರು ಕೂಡ ನಾನು ಹೊರಗಡೆ ಹೋಗುವುದಿಲ್ಲ. ನಾನು ಈ ಪಕ್ಷದ ಕಟ್ಟಾಳು. ಇಂದು ಬಿಜೆಪಿಯಲ್ಲಿ ಬಹಳ ಜನರಿದ್ದಾರೆ. ಅವರ್ಯಾರೂ ಹಳೆ ಬಿಜೆಪಿಗರಲ್ಲ. ಆದರೆ ನನ್ನಪ್ಪ, 1961ರಲ್ಲಿ ನಾಗ್ಪುರದಲ್ಲಿ ಓಟಿಸಿ ಕ್ಯಾಂಪ್ ಮಾಡಿದ್ದರು.
ಜನಸಂಘ ದೀಪದ ಗುರುತಿನಿಂದ ಗೆದ್ದು 10 ವರ್ಷ ಪಂಚಾಯಿತಿ ಚೇರ್‌ಮೆನ್ ಆಗಿದ್ದವರು. ನಾನು ಜನಸಂಘದ ಓರ್ವ ವ್ಯಕ್ತಿಯ ಮಗ. ನಾನು ಈ ಪಕ್ಷವನ್ನು ಬಿಟ್ಟು ಹೋಗೋದು, ಸ್ವತಂತ್ರವಾಗಿ ನಿಲ್ಲೋದು. ಈ ಪ್ರಶ್ನೆಗಳೇ ಬರಲ್ಲ. ನಾನು ಸಾಯುವವರೆಗೂ ಮೋದಿ ಭಕ್ತ. ನಾನು ಬಿಜೆಪಿ ಕಾರ್ಯಕರ್ತ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

