Saturday, November 15, 2025

Latest Posts

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಹಲವು ಹಾಲಿ ಸಂಸದರಿಗೆ ಬಿಜೆಪಿ ಶಾಕ್

- Advertisement -

National Political News: ಲೋಕಸಭೆ ಚುನಾವಣೆಗೆ ಬಿಜೆಪಿ ಎರಡನೇಯ ಪಟ್ಟಿ ರಿಲೀಸ್ ಮಾಡಿದ್ದು, ಕರ್ನಾಟಕದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕದಲ್ಲಿ ಈ ಬಾರಿ ಉಡುಪಿ- ಚಿಕ್ಕಮಗಳೂರು ಜಿಲ್ಲೆಯ ಲೋಕಸಭೆ ಟಿಕೇಟ್ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ನೀಡಲಾಗಿದೆ. ಈ ಮೂಲಕ ಶೋಭಾ ಕರಂದ್ಲಾಜೆಗೆ ಈ ಕ್ಷೇತ್ರದ ಟಿಕೇಟ್ ಮಿಸ್ ಆಗಿದೆ. ಆದರೆ ಸಂಸದ ಸದಾನಂದಗೌಡರ ಕ್ಷೇತ್ರವಾಗ, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆಗೆ ಟಿಕೇಟ್ ಸಿಕ್ಕಿದೆ. ಇನ್ನು ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟೀಲ್‌ಗೆ ಟಿಕೇಟ್ ಮಿಸ್ ಆಗಿದ್ದು, ಬ್ರಿಜೇಶ್ ಚೌಟಗೆ ಟಿಕೇಟ್ ಸಿಕ್ಕಿದೆ.

ಇನ್ನು ಧಾರವಾಡ ಲೋಕಸಭೆ ಕ್ಷೇತ್ರದ ಟಿಕೇಟ್ ಪ್ರಹ್ಲಾದ್ ಜೋಶಿಗೆ ಸಿಗತ್ತಾ ಅಥವಾ ಜಗದೀಶ್ ಶೆಟ್ಟರ್‌ಗೆ ಸಿಗತ್ತಾ ಎಂಬ ಗೊಂದವಿದ್ದಿತ್ತು. ಆದರೆ ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿಗೆ ಟಿಕೇಟ್ ನೀಡಲಾಗಿದೆ. ಇನ್ನು ಈಶ್ವರಪ್ಪ ಮಗನಿಗೆ ಹಾವೇರಿ ಟಿಕೇಟ್ ಕೊಡಿಸಲು ಪ್ರಯತ್ನ ಪಟ್ಟರೂ, ಆ ಪ್ರಯತ್ನ ವಿಫಲವಾಗಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿವರಿಗೇ ಹಾವೇರಿ ಲೋಕಸಭೆ ಎಲೆಕ್ಷನ್‌ಗೆ ಟಿಕೇಟ್ ಸಿಕ್ಕಿದೆ. ಬೆಂಗಳೂರು ರೂರಲ್‌ನಲ್ಲಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಸ್ಪರ್ಧಿಸಲಿದ್ದಾರೆ.

ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರಗೆ ಟಿಕೇಟ್ ಸಿಕ್ಕಿದ್ದು, ತುಮಕೂರಲ್ಲಿ ಸ್ಪರ್ಧಿಸಲು ಸೋಮಣ್ಣ ರೆಡಿಯಾಗಿದ್ದಾರೆ. ಇನ್ನು ಕುತೂಹಲಕಾರಿ ಕ್ಷೇತ್ರವಾಗಿ ಮೈಸೂರು-ಕೊಡಗು ಜಿಲ್ಲೆಯಲ್ಲಿ ಸ್ಪರ್ಧಿಸಲು ಯದುವೀರ್‌ ಚಾಮರಾಜದತ್ತ ಒಡೆಯರ್‌ಗೆ ಟಿಕೇಟ್ ನೀಡಲಾಗಿದೆ. ಈ ಮೂಲಕ ಮೊದಲೇ ಹೇಳಿದಂತೆ, ಪ್ರತಾಪ್ ಸಿಂಹಗೆ ಟಿಕೇಟ್ ಕೈ ತಪ್ಪಿದೆ.

ಹರಿಯಾಣಾದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ

ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ

ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್‌: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

- Advertisement -

Latest Posts

Don't Miss