- Advertisement -
Dharwad News: ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತೆ? ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಈಗ ಆ ಚರ್ಚೆಗಳಿಗೆಲ್ಲ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ.
ನಾಲ್ಕು ಬಾರಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದಿದ್ದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಇದೀಗ ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ ಜೋಶಿ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಆ ಮೂಲಕ ವಿವಿಧ ಚರ್ಚೆಗಳಿಗೆ ಅಂತಿಮವಾಗಿ ತೆರೆ ಎಳೆಯಲಾಗಿದೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ
- Advertisement -