National Political News: ನನಗೆ ಯಾವುದೇ ಸಂಬಂಧ, ಕ್ಷೇತ್ರ, ಮಂತ್ರಿಗಿರಿ, ವಸ್ತು ಸೇರಿ ಯಾವುದೇ ವಿಷಯದಲ್ಲೂ ಮೋಹವಿಲ್ಲ. ಬಂದದ್ದನ್ನು ಸ್ವೀಕರಿಸುತ್ತೇನೆ. ಬಾರದ್ದನ್ನು ಕಡೆಗಣಿಸುತ್ತೇನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಮೃತಿ ಇರಾನಿಗೆ ಸಂದರ್ಶಕಿ, ನಾವೀಗ ದಿಲ್ಲಿಯಲ್ಲಿದ್ದೇವೆ. ಸ್ಮೃತಿ ಇರಾನಿಯವರು ಈ ಸಿಟಿಗೆ ಬಂದು ಹಲವು ವರ್ಷಗಳಾಗಿರಬಹುದು ಎಂದಾಗ, ಸ್ಮೃತಿ ಇರಾನಿ 15 ವರ್ಷಗಳಿಂದ ನಾನು ದೆಹಲಿಯಲ್ಲಿದ್ದೇನೆ ಎಂದು ಹೇಳಿದ್ದಾರೆ. ಅದಕ್ಕೆ ಸಂದರ್ಶಕಿ ನಿಮಗೆ ಈ ಸಿಟಿಯ ಬಗ್ಗೆ ಎಮೋಷನಲ್ ಅಟ್ಯಾಚ್ಮೆಂಟ್ ಇರಬೇಕಲ್ಲಾ ಎಂದಾಗ, ಸ್ಮತಿ ಇರಾನಿ, ನನಗೆ ಯಾವುದೇ ಸಂಬಂಧ, ಕ್ಷೇತ್ರ, ಮಂತ್ರಿಗಿರಿ, ವಸ್ತು ಸೇರಿ ಯಾವುದೇ ವಿಷಯದಲ್ಲೂ ಮೋಹವಿಲ್ಲ. ಬಂದದ್ದನ್ನು ಸ್ವೀಕರಿಸುತ್ತೇನೆ. ಬಾರದ್ದನ್ನು ಕಡೆಗಣಿಸುತ್ತೇನೆ. ಏಕೆಂದರೆ, ನಾವು ಯಾವುದಾದರೂ ವಿಷಯದ ಬಗ್ಗೆ ಮೋಹವಿಟ್ಟುಕೊಂಡರೆ, ಅದರಿಂದ ನಮಗೆ ಬರೀ ದುಃಖವೇ ಸಿಗುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಇನ್ನು ಆಹಾರ ಪ್ರಿಯರಾಗಿರುವ ಸ್ಮೃತಿ ಇರಾನಿ, ಮುಂಬೈ, ದೆಹಲಿಯಲ್ಲಿ ಯಾವ ಹೊಟೇಲ್ನಲ್ಲಿ ಯಾವ ಆಹಾರ ರುಚಿಯಾಗಿರುತ್ತದೆ ಅಂತಾ ವಿವರಿಸಿದ್ದಾರೆ. ಅಲ್ಲದೇ, ಕೆಲಸ ಬಿಟ್ಟು, ಬೇರೆ ಕೆಲಸಕ್ಕೆ ನಾವು ಹೊರಗೆ ಹೋಗುತ್ತಿದ್ದೇನೆ ಎಂದರೆ, ಅಲ್ಲಿ ಅತ್ಯುತ್ತಮವಾದ ಭೋಜನ ನನಗಾಗಿ ಕಾಯುತ್ತಿದೆ ಎಂದರ್ಥ. ಇಲ್ಲವಾದಲ್ಲಿ ನಾನು ಮನೆಯಲ್ಲೇ ಇರುತ್ತೇನೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ




