Hubli News: ಹುಬ್ಬಳ್ಳಿ: ಬೆಳಗಾವಿಯಲ್ಲಿ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಪ್ರಭಾಕರ ಕೋರೆಯವರಾಗಲಿ, ಸ್ಥಳೀಯ ನಾಯಕರು ಯಾರು ಕೂಡ ವಿರೋಧ ಮಾಡಿಲ್ಲ. ಕುಂದಾನಗರಿಯಲ್ಲಿ ಯಾವುದೇ ಕುಂದುಕೊರತೆಗಳಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಪ್ರಭಾಕರ ಕೋರೆಯವರೊಂದಿಗೆ ಮಾತನಾಡಿದ್ದೇನೆ. ಯಾವುದೇ ರೀತಿಯಲ್ಲಿ ವಿರೋಧದ ಅಲೆಯಿಲ್ಲ. ಸುಮ್ಮನೆ ವದಂತಿ ಹರಿದಾಡುತ್ತಿವೆ ಎಂದರು.
ಬೆಳಗಾವಿಯಲ್ಲಿ ಶೆಟ್ಟರ್ ಗೆ ಸ್ಥಳೀಯ ನಾಯಕರ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಲ್ಲಿನ ನಾಯಕರೇ ಸರ್ವಾನುಮತದಿಂದ ಸ್ವಾಗತ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸ್ಪರ್ಧೆಗೆ ಮುಂದಾಗಿದ್ದೇನೆ. ಯಾವುದೇ ಅಸಮಾಧಾನ ಆಗಲಿ, ಮತ್ತೊಂದಾಗಲಿ ಯಾವುದು ಇಲ್ಲ ಎಂದು ಅವರು ಹೇಳಿದರು.
ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

