International News: ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಚುನಾವಣೆಯಲ್ಲಿ ಹೆಚ್ಚು ಮತಗಳಿಸಿ, ಗೆಲುವು ಸಾಧಿಸಿದ್ದಾರೆ. ಇನ್ನು 6 ವರ್ಷಗಳ ಕಾಲ ಪುಟಿನ್ ಮತ್ತೆ ರಷ್ಯಾವನ್ನು ಆಳಲಿದ್ದಾರೆ.
1999ರ್ಲಿ ಪುಟಿನ್ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಅಂದಿನಿಂದ ಇಂದಿನವರೆಗೂ ಪುಟಿನ್ ರಷ್ಯಾದ ಅಧ್ಯಕ್ಷರಾಗಿದ್ದಾರೆ. ಈ ಬಾರಿಯೂ ಪುಟೀನ್ ಗೆಲುವು ಸಾಧಿಸಿದ್ದು, ಇನ್ನು 6 ವರ್ಷಗಳ ಕಾಲ, ಪುಟೀನ್ ಖುರ್ಚಿ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ.
ಯಾಕಂದ್ರೆ ರಷ್ಯಾದಲ್ಲಿ ಪುಟಿನ್ ಎಷ್ಟರ ಮಟ್ಟಿಗೆ ಪ್ರಬಲರಾಗಿದ್ದಾರೆ ಎಂದರೆ, ಅವರ ವಿರುದ್ಧ ಯಾರಿಗೂ ಸ್ಪರ್ಧಿಸಲು ಅವಕಾಶವೇ ಇಲ್ಲ. ಎದುರಾಳಿ ಎಂದು ಯಾರಾದರೂ ಮುಂದೆ ಬಂದರೆ, ಅಂಥವರಿಗೆ ಜೈಲೇ ಗತಿ. ಅಲ್ಲದೇ, ಯಾರು ಪುಟಿನ್ ಅಧಿಕಾರವನ್ನು ವಿರೋಧಿಸುತ್ತಾರೋ, ಅವರಿಗೆ ಶಿಕ್ಷೆ ಗ್ಯಾರಂಟಿ. ಪುಟಿನ್ ವಿರೋಧಿ ಅಲೆಕ್ಸಿ ನವಲ್ನಿಯನ್ನು ಬಂಧಿಸಿ, ಜೈಲಿಗಟ್ಟಿದ್ದರು. ಕೆಲ ದಿನಗಳಲ್ಲೇ ಅವರು ಸಾಾವನ್ನಪ್ಪಿದ್ದರು. ಇದೆಲ್ಲವೂ ಪುಟಿನ್ ಕುತಂತ್ರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಎಲ್ಲರಿಗೂ ಜೀವ ಭಯವಿದ್ದ ಕಾರಣ, ಪುಟೀನ್ ವಿರುದ್ಧ ಯಾರೂ ಹೋಗಲು ಇಚ್ಚಿಸುವುದಿಲ್ಲ.
ಅಸಮಾಧಾನ ಎರಡು ಮೂರು ದಿನಗಳಲ್ಲಿ ಶಮಮಗೊಳ್ಳುತ್ತದೆ: ಬಿ.ಎಸ್.ಯಡಿಯೂರಪ್ಪ
ಚುನಾವಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ