Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಲೋಕಸಭೆ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ನಮ್ಮ ಪ್ರಚಾರ ಜೋರಾಗಿ ನಡೆದಿದೆ. ನಾನು 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
ಜನರ ಸ್ಪಂದನೆ ಉತ್ತಮವಾಗಿದೆ. ಮೋದಿ ಸರ್ಕಾರದಿಂದ ಆಗಿರುವ ಕೆಲಸ ಜನರೇ ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಬಗ್ಗೆ ಜನರೇ ಹೇಳುತ್ತಿದ್ದಾರೆ. ಬಹಳ ಸಂತೋಷವಾಗಿದೆ. ಅಲ್ಲದೇ, ಚುನಾವಣೆಗೆ ಸಮಯ ಹೆಚ್ಚಿದೆ. ಜನ ಈಗ ಬಿಜೆಪಿ, ಮೋದಿ, ಜೋಶಿಗೆ ವೋಟ್ ಹಾಕಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಮತದಾನದ ಅವಧಿಯೇ ದೂರ ಆದಂತಾಗಿದೆ. ಅದು ಬಿಟ್ಟರೇ ಉಳಿದಿದ್ದೆಲ್ಲವೂ ನೆಮ್ಮದಿಯಿಂದ ನಡೆದಿದೆ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಗೆ ಬಹಳ ಕಡೆ ಅಭ್ಯರ್ಥಿಗಳೇ ಇಲ್ಲ. ನಮ್ಮ ಕ್ಷೇತ್ರ ಸೇರಿ ಬಹಳ ಕಡೆ ಅವರಿಗೆ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹತಾಶರಾಗಿದ್ದಾರೆ ಎಂದಿದ್ದಾರೆ.
ಬಿಜೆಪಿಯಿಂದ ಕೆಲವರು ಹೊರಗೆ ಹೋಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ನಮ್ಮ ಪಕ್ಷದಲ್ಲಿ ಈ ಸಲ ಬಹಳ ಆಕಾಂಕ್ಷಿಗಳಾಗಿದ್ದರು. ಹೀಗಾಗಿ ಸ್ವಲ್ಪ ಅಸಮಾಧಾನದ ಸಮಸ್ಯೆಯಾಗಿದೆ. ಪಕ್ಷದಿಂದ ಸ್ಪರ್ಧಿಸಿದವರು ಗೆಲ್ಲುವರೆಂಬ ವಿಶ್ವಾಸವಿದೆ. ಹೀಗಾಗಿ ಅಭ್ಯರ್ಥಿಯಾಗಲು ಪೈಪೋಟಿ ಇತ್ತು. ಅಸಮಾಧಾನಿತರ ಜೊತೆ ಮಾತುಕತೆಗಳು ನಡೆದಿವೆ. ಈಶ್ವರಪ್ಪ ಜೊತೆ ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ. ಈಶ್ವರಪ್ಪ ಹಿರಿಯ, ಪಕ್ಷಕ್ಕೆ ಬದ್ಧತೆ ಇರುವ ನಾಯಕ ಎಂದಿದ್ದಾರೆ.
ಮಹದಾಯಿ ರೈತರಿಂದ ಪ್ರಚಾರಕ್ಕೆ ಬಿಡುವುದಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ, ಆ ರೀತಿ ಯಾರೂ ಹೇಳಿಲ್ಲ. ವನ್ಯಜೀವಿ ಪ್ರದೇಶದ್ದೆ ಗೊಂದಲವಿದೆ. ಮಹದಾಯಿ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇಲ್ಲಿಯವರೆಗೆ ಆಗಿದ್ದೆಲ್ಲ ಬಿಜೆಪಿಯೇ ಮಾಡಿದೆ. ಕಾಂಗ್ರೆಸ್ ಏನೂ ಮಾಡಿಲ್ಲ, ತದ್ವಿರುದ್ಧವಾಗಿ ನಡೆದುಕೊಂಡು ಬಂದಿದೆ. ಇಷ್ಟೊತ್ತಿಗೆ ಕೆಲಸ ಮುಗಿಬೇಕಿತ್ತು. ವನ್ಯಜೀವಿ ಮಂಡಳಿಯವರು ಸಮಯ ತೆಗೆದುಕೊಂಡಿದ್ದಕ್ಕೆ ವಿಳಂಬವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕಿತ್ತು. ಸ್ಪಷ್ಟವಾದ ವರದಿ ಕೊಡುವಲ್ಲಿ ವಿಳಂಬ ಮಾಡಿದೆ. ವನ್ಯಜೀವಿ ಮಂಡಳಿ ಸಮಸ್ಯೆ ಇತ್ಯರ್ಥವಾದರೆ ನಾವು ಕಾಮಗಾರಿ ಆರಂಭಿಸುತ್ತೇವೆ ಎಂದಿದ್ದಾರೆ.
ಮೋದಿ ಆಗಮನ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ, ಮೋದಿ ಹುಬ್ಬಳ್ಳಿಗೂ ಬರಲಿದ್ದಾರೆ. ಹಾವೇರಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಚಾರ ನಡೆಯಲಿದೆ. 3-4 ಕ್ಷೇತ್ರಗಳ ಪ್ರಚಾರ ಸೇರಿಸಿ ಹುಬ್ಬಳ್ಳಿಗೆ ಬರಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..