Friday, July 11, 2025

Latest Posts

ಹುಬ್ಬಳ್ಳಿ ಸುಳ್ಳ ರೋಡ್ ಕ್ರಾಸ್ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ನಗದು ವಶಕ್ಕೆ..

- Advertisement -

Hubli News: ಹುಬ್ಬಳ್ಳಿ: ದಾಖಲೆ ಇಲ್ಲದ ಸಾಗಟವಾಗುತ್ತಿದ್ದ 3ಲಕ್ಷ82 ಸಾವಿರ ನಗದು ಹಣವನ್ನು ಚೆಕ್‌ ಪೋಸ್ಟ್ ತಪಾಸಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಹುಬ್ಬಳ್ಳಿಯ ಸುಳ್ಳ ರೋಡ್ ಕ್ರಾಸ್‌ನ ಚೆಕ್ ಪೋಸ್ಟ್ ನಡೆದಿದೆ.‌

ಹುಬ್ಬಳ್ಳಿ ತಾಲೂಕಿನ ಕಿರೆಸೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ GJ 05 JB7162 ಕಾರನ್ನು ಕರ್ತವ್ಯದಲ್ಲಿ ಹಾಜರಿದ್ದ ಮ್ಯಾಜಿಸ್ಟ್ರೇಟ್ ರಮಜಾನಸಾಬ ಕಿಲ್ಲೇದಾರ , ಎಸ್ ಎಸ್ ಟಿ ಹಾಗೂ ಎಫ್ ಎಸ್ ಟಿ 3 ರ, ನಾಗಾ ನಾಯ್ಕ ,ಪೋಲೀಸ್ ಸಿಬ್ಬಂದಿಗಳು ತಡೆದು ತಪಾಸಣೆ ಮಾಡಿದಾಗ, ಕಾರಿನಲ್ಲಿ ಓಂಪ್ರಕಾಶ್ ಎನ್ನುವವರಿಗೆ ಸೇರಿದ್ದ ದಾಖಲೆ ಇಲ್ಲದ 3,82,000 ನಗದು ಪತ್ತೆಯಾಗಿದ್ದು, ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಹು-ಧಾ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾಧ್ಯಮ ಪ್ರಕಟನೆಯ ಮೂಲಕ ಮಾಹಿತಿ ನೀಡಿದ್ದಾರೆ. ಎಂಸಿಸಿ ನೋಡೆಲ್ ಅಧಿಕಾರಿ ರವೀಂದ್ರ ಕುಮಾರ್, ಪೋಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ,ಎ.ಎಸ್.ಐ ಆರ್ ಜಿ ನಾಯ್ಕ, ಎಎಸ್ ಐ ಜಿ.ಸಿ.ಕಡೇಮನಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ವಶಪಡಿಸಿಕೊಂಡಿರುವ ದಾಖಲೆ ಇಲ್ಲದ ಹಣವನ್ನು ತಕ್ಷಣೆ ಖಜಾನೆಯಲ್ಲಿ ಡಿಪಾಸಿಟ್ ಮಾಡಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಸೀಜರ್ ಕಮಿಟಿಗೆ ವರದಿ ಸಲ್ಲಿಕೆ ಮಾಡಿಲಾಗುದೆ ಎಂದು ತಿಳಿಸಿದ್ದಾರೆ.

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

- Advertisement -

Latest Posts

Don't Miss