ಟ್ಯಾಂಕರ್ ಮಾಲೀಕರು ನಿಗದಿ ದರಕ್ಕಿಂತ ಹೆಚ್ಚು ಹಣ ಪಡೆದರೆ ಈ ನಂಬರ್‌ಗೆ ದೂರು ಸಲ್ಲಿಸಿ..

Bengaluru News: ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯಲು, ಬಳಸಲು ನೀರಿನಲ್ಲದೇ, ಎಷ್ಟೋ ಜನ ಬೇರೆ ಮನೆಗೆ ಬಾಡಿಗೆ ಹೋಗಿದ್ದಾರೆ. ಅಂಥ ಪರಿಸ್ಥಿತಿ ಸಿಲಿಕಾನ್ ಸಿಟಿ ಜನರದ್ದಾಗಿದೆ. ಬೇಸಿಗೆ ಮುಗಿಯುವವರೆಗೂ ಈ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಹಲವರು ನೀರಿಗಾಗಿ ಟ್ಯಾಂಕರ್ ಮೊರೆ ಹೋಗಿದ್ದಾರೆ.

ಆದರೆ ಕೆಲ ಟ್ಯಾಂಕರ್ ಮಾಲೀಕರು ನಿಗದಿ ದರಕ್ಕಿಂತ ಹೆಚ್ಚು ರೇಟಿಗೆ ನೀರನ್ನು ಮಾರುತ್ತಿದ್ದಾರೆಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್, ಖಾಸಗಿ ಟ್ಯಾಂಕರ್ ಮಾಲೀಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದರ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಬೆಂಗಳೂರಿನ ನಿವಾಸಿಗಳಲ್ಲಿ ನನ್ನ ಮನವಿಯೇನೆಂದರೆ ಟ್ಯಾಂಕರ್ ಮಾಲೀಕರು ಅಕಸ್ಮಾತ್‌ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಕೂಡಲೇ ಬಿಬಿಎಂಪಿ ಸಹಾಯವಾಣಿ 1533ಕ್ಕೆ ಕರೆ ಮಾಡಿ ದೂರು ಸಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಜಲಕ್ಷಾಮ ಉಂಟಾಗಿದ್ದಕ್ಕೆ, ಆಕ್ರೋಶ ಹೊರಹಾಕಿರುವ ಜನ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟ ಕಾರಣ, ಇಂದು ನಮಗೆ ನೀರಿಲ್ಲವೆಂದು ಹೇಳಿದ್ದಾರೆ.

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

About The Author