Friday, August 29, 2025

Latest Posts

ಈ ವರ್ಷ ದೀಪಾವಳಿ ಹೊತ್ತಿಗೆ 70 ಸಾವಿರ ದಾಟಬಹುದು ಚಿನ್ನದ ಬೆಲೆ.. ಕಾರಣವೇನು ಗೊತ್ತಾ..?

- Advertisement -

News: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನ ಕುಸುಮವಾಗುತ್ತಿದೆ. ಬಡವರು, ಮಧ್ಯಮ ವರ್ಗದವರು ಚಿನ್ನದ ಅಂಗಡಿಯ ಕಡೆ ತಲೆ ಹಾಕಿ ಮಲಗುವಂತೆಯೂ ಇಲ್ಲ, ಆ ರೀತಿ ಬೆಲೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ 66 ಸಾವಿರದ ಗಡಿ ದಾಟಿದೆ. ಇದು ಬೇರೆ ಮದುವೆ ಮುಂಜಿ ಸಮಯ, ಇನ್ನೆರಡು ತಿಂಗಳು ಕಳೆದರೆ, ಅಕ್ಷಯ ತೃತೀಯ ಕೂಡ ಬರುತ್ತದೆ. ಈ ಹೊತ್ತಲ್ಲಿ, ಚಿನ್ನದ ಬೆಲೆ ಇನ್ನೂ ಏರಲಿದೆ. ಇನ್ನು ದೀಪಾವಳಿ ಹೊತ್ತಲ್ಲಿ ಚಿನ್ನದ ಬೆಲೆ 70 ಸಾವಿರ ದಾಟಬಹುದು ಎನ್ನಲಾಗಿದೆ. ಇನ್ನು ಐದಾರು ತಿಂಗಳ ಹಿಂದೆಯೇ, ಮಾರ್ಚ್ ಏಪ್ರಿಲ್‌ನಲ್ಲಿ ಚಿನ್ನದ ಬೆಲೆ 65 ಸಾವಿರ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿತ್ತು. ಅದೇ ರೀತಿ ಇಂದಿನ ದರವಿದೆ.

ಇನ್ನು ಯಾಕೆ ಚಿನ್ನದ ಬೆಲೆ ಇಷ್ಟು ಹೆಚ್ಚಾಗುತ್ತಿದೆ ಅಂತಾ ಹೇಳುವುದಾದರೆ, ವಿಶ್ವದ ಹಲವು ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನ ಖರೀದಿ ಹೆಚ್ಚು ಮಾಡಿದೆ. ಹಾಗಾಗಿ ಚಿನ್ನದ ಬೆಲೆ ಏರುತ್ತಿದೆ. ಇನ್ನು ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಹೆಚ್ಚಾದರೆ, ಚಿನ್ನದ ದರ ಕಡಿಮೆಯಾಗುತ್ತದೆ. ಅದೇ ರೀತಿ ಬಡ್ಡಿದರ ಕಡಿಮೆಯಾದರ,ೆ ಚಿನ್ನದ ದರ ಹೆಚ್ಚುತ್ತದೆ.

ಇಡೀ ಪ್ರಪಂಚದಲ್ಲಿ ಚಿನ್ನಕ್ಕೆ ಹೆಚ್ಚು ಬೇಡಿಕೆ ಇರುವುದೇ ನಮ್ಮ ಭಾರತ ದೇಶದಲ್ಲಿ. ಇನ್ನು ಮೇನಲ್ಲಿ ಅಕ್ಷಯ ತೃತೀಯ ಮುಗಿದು ಭಾರತದಲ್ಲಿ ಚಿನ್ನ ಖರೀದಿಸುವ ಸಂಖ್ಯೆ ಕಡಿಮೆಯಾಗುತ್ತದೆ. ಈ ವೇಳೆ ಜೂನ್ ಜುಲೈ ಸಮಯದಲ್ಲಿ ಚಿನ್ನದ ದರ ಇಳಿಯಬಹುದು.

ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

- Advertisement -

Latest Posts

Don't Miss