Political News: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಭಾರೀ ಪ್ರಮಾಣದ ಚುನಾವಣಾ ಅಕ್ರಮಗಳ ವಿರುದ್ಧ ಸಾಕ್ಷಿ ಸಮೇತ ಇಂದು ರಾಮನಗರ ಟೌನ್ ನ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಲಾಯಿತು.
ಕಾಂಗ್ರೇಸ್ ಪಕ್ಷ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಾಗೂ ಸೀರೆ ಹಂಚುವ ಮೂಲಕ ಚುನಾವಣಾ ಅಕ್ರಮದಲ್ಲಿ ತೊಡಗಿದ್ದು, ಈ ಕುರಿತು ಕೇಂದ್ರ ಚುನಾವಣಾ ಆಯೋಗ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಇದೇ ವೇಳೆ ಜೆ.ಡಿ.ಎಸ್ ಹಾಗೂ ಬಿ.ಜೆ.ಪಿ ಪಕ್ಷದ ಮುಖಂಡರು ಜೊತೆಯಲ್ಲಿದ್ದರು.
ಈ ವೇಳೆ ಮಾತನಾಡಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಈ ಬಗ್ಗೆ ನಾನು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುನಾವಣಾ ಆಯೋಗಕ್ಕೆ ನಾನೊಂದು ಪ್ರಶ್ನೆಯನ್ನು ಮಾಡಬೇಕು. ಚುನಾವಣಾ ಕಾರ್ಯ ಇವತ್ತು ಯಾವ ರೀತಿ ಪಾರದರ್ಶಕವಾಗಿ ನಡೆಯುತ್ತಿದೆ ಎನ್ನುವ ಯಕ್ಷ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿದೆ. ಪಾರದರ್ಶಕವಾಗಿ ನಡೆಬೇಕಿದ್ದ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದಿದ್ದಾರೆ.
3,700 ಮೆಟಿರಿಯಲ್ಗಳು ಗೋಡೌನ್ನಲ್ಲಿದ್ದು, ಇದನ್ನು ಜಪ್ತಿ ಮಾಡಲಾಗಿದೆ. ಇವೆಲ್ಲವೂ 14 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಾಗಿದೆ ಎಂದು ಹೇಳಿರುವ ನಿಖಿಲ್ ಕುಮಾರ್, ಅದರ ಪೂರ್ತಿ ವಿವರಣೆ ಮಾಡಿದ್ದಾರೆ. ಅಲ್ಲದೇ, ಈ ವಸ್ತುಗಳನ್ನು ಖರೀದಿಸಿದ ಕಂಪನಿಯ ಮಾಲೀಕತ್ವ ಯಾರದ್ದು ಅಂತಲೂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಭಾರೀ ಪ್ರಮಾಣದ ಚುನಾವಣಾ ಅಕ್ರಮಗಳ ವಿರುದ್ಧ ಸಾಕ್ಷಿ ಸಮೇತ ಇಂದು ರಾಮನಗರ ಟೌನ್ ನ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಲಾಯಿತು
ಕಾಂಗ್ರೇಸ್ ಪಕ್ಷ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಾಗೂ ಸೀರೆ ಹಂಚುವ ಮೂಲಕ ಚುನಾವಣಾ ಅಕ್ರಮದಲ್ಲಿ… pic.twitter.com/1UHFPPegSR
— Nikhil Kumar (@Nikhil_Kumar_k) March 20, 2024
ಶಾಲೆಯಿಂದ ಬರುತ್ತಿದ ಬಾಲಕಿ ಮೇಲೆ ರಸ್ತೆಯಲ್ಲೇ ಲೈಂ*ಗಿಕ ಕಿರುಕುಳ: ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು




