Dharwad News: ಧಾರವಾಡ : ಧಾರವಾಡ ತೇಜಸ್ವಿನಗರ ನಿವಾಸಿ ರೌಡಿಶೀಟರ್ ಇರ್ಫಾನ್ ಶೇಖ್ ಅಲಿಯಾಸ್ ಛೋಟಾ ಇರ್ಫಾನ್ ಎಂಬಾತನನ್ನು ಗಡಿಪಾರು ಮಾಡಿ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ.
ಕೊಲೆ ಪ್ರಕರಣವೊಂದರಲ್ಲಿ ಇರ್ಫಾನ್ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕವೂ ಆತ ಅಪರಾಧ ಕೃತ್ಯ ಮುಂದುವರೆಸಿದ್ದ. ಕಲಬುರ್ಗಿ ಜಿಲ್ಲೆ ನೆಲೋಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಈತ ಅಪರಾಧ ಕೃತ್ಯ ನಡೆಸಿದ್ದ. ಈತನ ಮೇಲೆ ಕೊಲೆ ಮಾಡಿದ ಹಾಗೂ ಕೊಲೆ ಯತ್ನದ ದೂರುಗಳು ದಾಖಲಾಗಿವೆ.
ಈತ ಜೈಲಿನಿಂದ ಬಿಡುಗಡೆಗೊಂಡು ಬಂದ ಬಳಿಕ ಈತನ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಈತ ಮತ್ತೆ ರೌಡಿಸಂ ಮುಂದುವರೆಸಿದ್ದ. ಈ ಹಿನ್ನೆಲೆಯಲ್ಲಿ ಮಾರ್ಚ್ 29 ರಿಂದ ಆರು ತಿಂಗಳ ಕಾಲ ಈತನನ್ನು ಯಾದಗಿರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..
ನೀವು ಯಾವ ಸೀಮೆ ‘ಸ್ಟ್ರಾಂಗ್’ ಸಿಎಂ ಬಿಡ್ರೀ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೀತಂಗೌಡ ಕಿಡಿ..