Monday, June 23, 2025

Latest Posts

ಸದ್ಗುರು ಜಗ್ಗಿ ವಾಸುದೇವ್ ಗುರೂಜಿಗೆ ಮೆದುಳಿನ ಚಿಕಿತ್ಸೆ

- Advertisement -

News: ಸದ್ಗುರು ಜಗ್ಗಿ ವಾಸುದೇವ್ ಗುರೂಜಿ ಅವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಯಾಗಿದೆ. ರಕ್ತಸ್ರಾವ ಮತ್ತು ಮೆದುಳು ಊದಿದ್ದ ಕಾರಣ, ಗುರೂಜಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಆಪರೇಷನ್ ಮಾಡಲಾಗಿದೆ.

ಕಳೆದ ನಾಲ್ಕು ವಾರಗಳಿಂದ ಜಗ್ಗಿ ವಾಸುದೇವ್ ಗುರೂಜಿ ತೀವ್ರ ತಲೆನೋವಿನಿಂದ ಬಳಲುತ್ತಿದ್ದು, ಸಾಮಾನ್ಯ ತಲೆನೋವೆಂದು ತಿಳಿದು ಸುಮ್ಮನಾಗಿದ್ದಾರೆ. ಆದರೆ ಮಾರ್ಚ್ 14ರಂದು ದೆಹಲಿಗೆ ಬಂದಿದ್ದಾಗ, ಗುರೂಜಿಗೆ ತೀವ್ರ ತಲೆನೋವಾಗಿದೆ. ಈ ವೇಳೆ ವೈದ್ಯರ ಬಳಿ ಹೋದಾಗ, ಮೆದುಳು ಊದಿಕೊಂಡು, ರಕ್ತಸ್ರಾವವಾಗಿದ್ದು ಗೊತ್ತಾಗಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಿಸಿ, ಆಪರೇಷನ್ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗ್ಗಿ ವಾಸುದೇವ್, ನಾನು ಆರೋಗ್ಯವಾಗಿದ್ದೇನೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೇನೆ. ಇಲ್ಲಿನ ವೈದ್ಯರು ನನ್ನ ತಲೆಯಲ್ಲಿ ಹೇನು ಹುಡುಕಲು ಹೋಗಿದ್ದರು. ಆದರೆ ಹೇನು ಸಿಗಲಿಲ್ಲ. ಕೊನೆಗೆ ಬ್ಯಾಂಡೇಜ್ ಹಾಕಿದ್ದಾರೆಂದು ತಮಾಷೆ ಮಾಡಿದ್ದಾರೆ. ಜೊತೆಗೆ ಮೆದುಳಿಗೆ ಯಾವುದೇ ಹಾನಿಯಾಗಿಲ್ಲವೆಂದು ಹೇಳಿದ್ದಾರೆ. ಇನ್ನು ಗುರೂಜಿ ಬೇಗ ಗುಣಮುಖರಾಗಿ ಬರಲಿ ಎಂದು ಹಲವು ಗಣ್ಯರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..

ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವದಂತಿ

ನೀವು ಯಾವ ಸೀಮೆ ‘ಸ್ಟ್ರಾಂಗ್’ ಸಿಎಂ ಬಿಡ್ರೀ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೀತಂಗೌಡ ಕಿಡಿ..

- Advertisement -

Latest Posts

Don't Miss