Political News:ಕೋಲಾರದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಟಿಕೇಟ್ ಆಕಾಂಕ್ಷಿಗಳು ರಾಜೀನಾಮೆ ನೀಡುತ್ತೇವೆ ಎಂದು ಇಂದು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಿಜೆಪಿ ನಾಯಕ ಪ್ರೀತಂಗೌಡ ವ್ಯಂಗ್ಯಾವಾಡಿದ್ದಾರೆ.
ಕೋಲಾರದ ಸಿದ್ದರಾಮಯ್ಯನವರ ನಾಟಕ ಮಂಡಳಿ ವತಿಯಿಂದ ಇಂದಿನ ಹೊಸ ನಾಟಕ “ರಾಜೀನಾಮೆ ಹೈಡ್ರಾಮಾ”. ಸಿಎಂ ಅವರು ತಾವೊಬ್ಬರೇ ದಲಿತೋದ್ಧಾರಕ ಎಂದು ಫೋಟೋಗಳಿಗೆ ಪೋಸ್ ಕೊಡುತ್ತ ಕಾಂಗ್ರೆಸ್ಸಿನ ದಲಿತ ನಾಯಕರುಗಳನ್ನೆಲ್ಲ ಬದಿಗೆ ತಳ್ಳಿ ಸಿಎಂ ಹುದ್ದೆ ಗಿಟ್ಟಿಸಿಕೊಂಡರು.
ತಮಗೆ ಅಡ್ಡಲಾಗಿದ್ದ ಖರ್ಗೆಯವರನ್ನು ದೆಹಲಿಗೆ ಸಾಗಿಹಾಕಿ, ಮುನಿಯಪ್ಪನವರನ್ನು ಚುನಾವಣೆಯಲ್ಲಿ ಸೋಲಿಸಿ ತಮ್ಮ ಹಾದಿ ಸುಗಮ ಮಾಡಿಕೊಂಡವರು ಯಾರೆಂದು ರಾಜ್ಯಕ್ಕೆ ತಿಳಿದಿದೆ. ಈಗ ಮತ್ತೆ ಮುನಿಯಪ್ಪನವರನ್ನು ಹಣಿಯಲು ತಮ್ಮ ಬಣದವರನ್ನು ಎತ್ತಿ ಕಟ್ಟಿರುವುದು ಅಚ್ಚರಿಯೇನಲ್ಲ ಎಂದು ಪ್ರೀತಂ ಹೇಳಿದ್ದಾರೆ.
ಆದರೆ, ಕಾಂಗ್ರೆಸ್ಸಿಗರು ಇಂದಿನ ರಾಜೀನಾಮೆ ನಾಟಕದ ಮೂಲಕ, ತಮ್ಮ ಪಕ್ಷದ ಆಂತರಿಕ ಸಮಸ್ಯೆಗೆ ಸಭಾಪತಿ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿದ್ದು ಅಕ್ಷಮ್ಯ ಎಂದು ಬಿಜೆಪಿ ನಾಯಕ ಪ್ರೀತಂಗೌಡ ಹೇಳಿದ್ದಾರೆ.
ಹುಟ್ಟುಹಬ್ಬದ ದಿನ ಪತ್ನಿ, ಮಗುವಿನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಟ ರಾಮ್ ಚರಣ್
ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಬೆಳಗಾವಿಯಲ್ಲಿ ಶೆಟ್ಟರ್ ಪರ ಮಾಜಿ ಸಿಎಂ ಯಡಿಯೂರಪ್ಪ ಭರ್ಜರಿ ಕ್ಯಾಂಪೇನ್




