National News: ಆ ಬಾಲಕಿ ತನ್ನ ಬರ್ತ್‌ಡೇ ಸಂಭ್ರಮದಲ್ಲಿದ್ದಳು. ಆಕೆಗಾಗಿ ಮನೆ ಮಂದಿ ಕೇಕ್ ತರಿಸಿ, ಸಂಭ್ರಮಾಚರಣೆಗೆ ಸಿದ್ಧರಾಗಿದ್ದರು. ಆದರೆ ಕೇಕ್ ತಿಂದ ಬಳಿಕ ಆ ಮಗು ಸಾವನ್ನನಪ್ಪಿದ್ದು, ಮನೆಮಂದಿಯೆಲ್ಲ ಆಸ್ಪತ್ರೆ ಸೇರಿದ್ದಾರೆ.
ಈ ಘಟನೆ ನಡೆದಿದ್ದು ಪಂಜಾಬ್‌ನ ಪಟಿಯಾಲಾದಲ್ಲಿ. ಮಾನ್ವಿ ಎಂಬ 10 ವರ್ಷದ ಬಾಲಕಿಯ ಹುಟ್ಟುಹಬ್ಬ ಆಚರಿಸುವುದಕ್ಕಾಗಿ, ಆಕೆಯ ಕುಟುಂಬದವರು ಆನ್‌ಲೈನ್ ಮೂಲಕ ಕೇಕ್ ಆರ್ಡರ್ ಮಾಡಿದ್ದಾರೆ. ಸ್ನೇಹಿತರು, ಸಂಂಬಂಧಿಕರನ್ನು ಹುಟ್ಟುಹಬ್ಬ ಆಚರಿಸಿಕೊಳ್ಳಲು ಕರೆದಿದ್ದಾರೆ. ಪಾರ್ಟಿ ಶುರುವಾದ ಬಳಿಕ ಮಾನ್ವಿ ಕೇಕ್ ಕತ್ತರಿಸಿ, ತಾನು ತಿಂದಿದ್ದಾಳೆ. ಮತ್ತು ಎಲ್ಲರಿಗೂ ಕೇಕ್ ಹಂಚಲಾಗಿದೆ.
ಎಲ್ಲರಿಗೂ ಕಡಿಮೆ ಪ್ರಮಾಣದಲ್ಲಿ ಕೇಕ್ ಹಂಚಿದ ಪರಿಣಾಮ ಅವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರೆ, ಮಾನ್ವಿ ಮಾತ್ರ ಹೆಚ್ಚು ಕೇಕ್ ತಿಂದಿದ್ದಾಳೆ. ಅಲ್ಲದೇ, ಬರ್ತ್‌ಡೇ ಗರ್ಲ್ ಆಗಿರುವ ಕಾರಣ, ಆಕೆಗೆ ಎಲ್ಲರೂ ಕೇಕ್ ತಿನ್ನಿಸಿದ್ದಾರೆ. ಹಾಗಾಗಿ ಆಕೆಗೆ ಚಿಕಿತ್ಸೆ ಫಲಿಸದೇ, ಸಾವನ್ನಪ್ಪಿದ್ದಾಳೆ. ತಪಾಸಣೆ ನಡೆಸಿದಾಗ, ಫುಡ್ ಪಾಯ್ಸಿನ್ ಆಗಿ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಕೇಕ್ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಬ್ಯಾಡ್ಮಿಂಟನ್ ತಾರೆ ಸೈನಾ
ಇದ್ರು ,ಹೋದ್ರು ನನಗೆ ಮಂಡ್ಯ ಸಾಕು. ಸ್ವಾರ್ಥ ಅನ್ನೋದು ಇದ್ರೆ ಮಂಡ್ಯ ಮಾತ್ರ: ಸಂಸದೆ ಸುಮಲತಾ ಅಂಬರೀಷ್