Hassan News : ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಕೇರಳದಲ್ಲಿ ಸಾಲದ ಶೂಲದಲ್ಲಿ ಇಡೀ ಸರ್ಕಾರ ಸಿಲುಕಿದ್ದು ದಿವಾಳಿ ಹಂಚಿಗೆ ತುಲುಪಿದೆ, ಕರ್ನಾಟಕವೂ ಅದೇ ಹಾದಿಯಲ್ಲಿದೆ, ಇದನ್ನು ದು:ಖದಲ್ಲಿ ಹೇಳುತ್ತಿದ್ದೇನೆ, ಸಿದ್ದರಾಮಯ್ಯ ಅವರ ಸಿದ್ರಾಮಿಕ್ಸ್ ರಾಜ್ಯವನ್ನು ದಿವಾಳಿ ಕಡೆಗೆ ತೆಗೆದುಕೊಂಡು ಹೋಗುತ್ತಿದೆ, ಅವರ ತಪ್ಪು ನೀತಿಯಿಂದ ಕೇರಳದ ಹಾದಿಯಲ್ಲಿ ಕರ್ನಾಟಕ ನಡಿತ್ತಿರುವುದು ದುರ್ದೈವದ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗ ಎಂಎಲ್‌ಎಗಳನ್ನು ತೃಪ್ತಿ ಪಡಿಸಲು, ಅಸಮಾಧಾನ ಸ್ಪೋಟಗೊಳ್ಳದೇ ಇರಲು ಸೂಟ್‌ಕೇಸ್ ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ, ಸೂಟ್‌ಕೇಸ್ ಕೊಟ್ಟು ಕೊಟ್ಟು ಸಮಾಧಾನ ಮಾಡ್ತಾ ಇದ್ದಾರೆ, 70ರ ದಶಕದಲ್ಲಿ ಪರ್ಸ್ ಕೊಡೋರಂತೆ, ಪ್ಯಾಕೇಟ್ ಮನಿ ಅಂತ ದೇವರಾಜು ಅರಸು ಮುಖ್ಯಮಂತ್ರಿ ಆಗಿದ್ದಾಗ, ಈಗ ಸಿದ್ರಾಮಿಕ್ಸ್‌ನ ಪರಿಣಾಮ ರಾಜ್ಯ ದಿವಾಳಿ ಕಡೆಗೆ ಹೋಗ್ತಿದೆ, ಅವರದ್ದೇ ಪಕ್ಷದ ಎಂಎಲ್‌ಎಗಳು ಆಕ್ರೋಶಗೊಂಡಿದ್ದಾರೆ, ಅವರನ್ನು ಸಮಾಧಾನ ಮಾಡಲು ಕೆಲವು ಸಚಿವರಿಗೆ ನೀನು ಇಷ್ಟು ಎಂಎಲ್‌ಎಗಳಿಗೆ ಸೂಟ್‌ಕೇಸ್ ಕೊಡು ಅಂತ ಸೂಟ್‌ಕೇಸ್ ಕೊಡುವ ಕೆಲಸ ಮಾಡುತ್ತಿದ್ದಾರೆ, ಹೀಗೆ ಮುಂದುವರಿದರೆ ಕೇರಳದ ಮಾದರಿಯಲ್ಲಿ ಕೇರಳದ ಮಾದರಿಯಲ್ಲಿ ದಿವಾಳಿಯ ಸ್ಥಿತಿಗೆ ಕರ್ನಾಟಕವನ್ನು ಮುಟ್ಟಿಸುತ್ತಾರೆ ಎಂದು ಹರಿಹಾಯ್ದರು.